ಹೂ ಒಂದು.. ಪರಿಹಾರ ಹಲವು..!

ಸ್ಯಾಫ್ಲವರ್ ಎಣ್ಣೆಯನ್ನು ಸ್ಯಾಫ್ಲವರ್ ಸಸ್ಯದ ಬೀಜಗಳಿಂದ ತಯಾರಿಸಲಾಗುತ್ತದೆ. ಇದರ ಪ್ರಕಾಶಮಾನವಾದ ಹಳದಿ ಮತ್ತು ಕಿತ್ತಳೆ ಬಣ್ಣಗಳಿಂದ ಈ ಹೂವು ಕಂಗೊಳಿಸುತ್ತಿರುತ್ತದೆ. ಸಾಮಾನ್ಯವಾಗಿ ಸ್ಯಾಫ್ಲವರ್ ಆಯಿಲ್​ಅನ್ನ ಸ್ಕಿನ್​ ಪ್ರಾಡೆಕ್ಟ್ಸ್​ಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಅಷ್ಟೇ ಅಲ್ಲ. ಈ ಎಣ್ಣೆ ನೋವು ನಿವಾರಿಸುವ ಗುಣಗಳನ್ನ ಹೊಂದಿದೆ ಎಂದು ಕೆಲವು ಅಧ್ಯಯನಗಳು ಹೇಳಿವೆ. ಸ್ಯಾಫ್ಲವರ್ ಆಯಿಲ್​ನಲ್ಲಿ ಆ್ಯಂಟಿ ಆ್ಯಕ್ಸಿಡೆಂಟ್​ ಹಾಗೂ ಆ್ಯಂಟಿ ಇನ್​ಫ್ಲಾಮೇಟರಿ ಗುಣಗಳಿರುವುದರಿಂದ ನಿಮ್ಮ ಚರ್ಮಕ್ಕೆ ಮಾಯಿಶ್ಚರೈಸ್​ ಮಾಡುತ್ತದೆ. ಸ್ಯಾಫ್ಲವರ್ ಉಪಯೋಗಗಳು ಇಲ್ಲಿವೆ ನೋಡಿ.

1. ಟ್ಯಾನಿಂಗ್​: ಸ್ಯಾಫ್ಲರ್​ನಲ್ಲಿ ಸ್ಕಿನ್​ ಲೈಟ್​ನಿಂಗ್​ ಗುಣಗಳಿವೆ. ಇದು ಸನ್​ಬರ್ನ್​ ಉಂಟಾಗದಂತೆ ಚರ್ಮವನ್ನ ರಕ್ಷಿಸುತ್ತದೆ. ಇನ್ನು ಇದರಲ್ಲಿರುವ ವಿಟಮಿನ್​ ಇ ಹಾನಿಕಾರಕ ಅಲ್ಟ್ರಾವೈಲೆಟ್​ ರೇಸ್​ನಿಂದ ರಕ್ಷಣೆ ನೀಡುತ್ತದೆ.

2. ಮೊಡವೆ: ಸ್ಯಾಫ್ಲವರ್ ಎಣ್ಣೆಯಲ್ಲಿ ಕಾಮೆಡೋಜೆನಿಕ್​ ಗುಣಗಳಿದ್ದು, ಚರ್ಮದ ಮೇಲೆ ರಂಧ್ರಗಳು ಉಂಟಾಗದಂತೆ ಕಾಪಾಡುತ್ತದೆ. ಜೊತೆಗೆ ಮೊಡವೆಗಳನ್ನ ಮತ್ತು ಕಲೆಗಳನ್ನು ಹೋಗಲಾಡಿಸಿ, ಇನ್​ಫ್ಲಾಮೇನ್​ ಕಡಿಮೆ ಮಾಡುತ್ತದೆ. ಕೆಲವು ವಾರಗಳ ಸ್ಯಾಫ್ಲವರ್ ಆಯಿಲ್​ಅನ್ನು ನಿಯಮಿತವಾಗಿ ಬಳಸುವುದರಿಂದ ನಿಮ್ಮ ಮುಖದಲ್ಲಿ ರಂಧ್ರಗಳು ಉಂಟಾಗುವುದನ್ನ ತಡೆದು ಮೊಡವೆ ಕಡಿಮೆ ಮಾಡುತ್ತದೆ. ಸ್ಯಾಫ್ಲವರ್ ಆಯಿಲ್​ಅನ್ನ ರಾತ್ರಿ ಮುಖಕ್ಕೆ ಹಚ್ಚಿ ರಾತ್ರಿಪೂರ ಬಿಟ್ಟು ಬೆಳಿಗ್ಗೆ ಮುಖ ತೊಳೆದುಕೊಳ್ಳುವುದರಿಂದ ಉತ್ತಮ ಫಲಿತಾಂಶ ಪಡೆದುಕೊಳ್ಳಬಹುದು.

3. ಆ್ಯಂಟಿ ಏಜಿಂಗ್​ : ಸ್ಯಾಫ್ಲವರ್​ ಆ್ಯಂಟಿ ಏಜಿಂಗ್​ ಗುಣಗಳನ್ನ ಹೊಂದಿದೆ. ಇದರಲ್ಲಿರುವ ವಿಟಮಿನ್ ಇ ಚರ್ಮ ಸುಕ್ಕುಗಟ್ಟುವುದನ್ನ ತಡೆದು, ನಿಮ್ಮ ಚರ್ಮ ಹೊಳೆಯುವಂತೆ ಮಾಡುತ್ತದೆ. ಅಡುಗೆ ಎಣ್ಣೆ ಜೊತೆ ಸ್ಯಾಫ್ಲವರ್​ ಆಯಿಲ್​ ಮಿಕ್ಸ್​ ಮಾಡಿ ಹಚ್ಚುವುದರಿಂದ ಉತ್ತಮ ಫಲಿತಾಂಶ ದೊರೆಯುತ್ತದೆ.

4. ಎಸ್ಜಿಮಾ: ಸಾಮಾನ್ಯವಾಗಿ ಚರ್ಮದ ಮೇಲೆ ಇನ್​ಫ್ಲಾಮೇಶನ್​ ಉಂಟಾಗುತ್ತದೆ. ಈ ವೇಳೆ ಚರ್ಮದ ಮೇಲೆ ಸ್ಯಾಫ್ಲವರ್ ಆಯಿಲ್​ ಹಚ್ಚುವುದರಿಂದ ದೇಹವು ವಿಟಮಿನ್ ಎ ಮತ್ತು ಇ ನಂತಹ ವಿಟಮಿನ್​ಗಳನ್ನ ಉತ್ಪಾದಿಸಲು ಸಹಾಯ ಮಾಡುತ್ತದೆ. ಈ ಜೀವಸತ್ವಗಳು ನಿಮ್ಮ ಜೀವಕೋಶಗಳ ಆರೋಗ್ಯ ಉತ್ತಮವಾಗಿರಲು ಸಹಾಯ ಮಾಡುತ್ತದೆ.

5. ಗಾಯಗಳನ್ನು ಗುಣಪಡಿಸುತ್ತದೆ: ಸ್ಯಾಫ್ಲವರ್ ಆಯಿಲ್​ನಲ್ಲಿ ಲಿನೊಲಿಯಿಕ್ ಆಮ್ಲವಿದೆ, ಇದು ಗಾಯಗಳನ್ನು ವೇಗವಾಗಿ ಗುಣಪಡಿಸುತ್ತದೆ. ಲಿನೋಲಿಯಿಕ್ ಆಮ್ಲವು ಹೊಸ ರಕ್ತ ಕಣಗಳ ರಚನೆಯನ್ನು ಪ್ರೇರೇಪಿಸುತ್ತದೆ ಮತ್ತು ಗಾಯಗಳ ವಾಸಿಮಾಡುವಿಕೆಯ ವೇಗವನ್ನು ಹೆಚ್ಚಿಸಿ, ಇನ್​ಫಾಮೇಶನ್​ ಕಡಿಮೆ ಮಾಡುತ್ತದೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv