ಚಾಕು ಇರಿದುಕೊಂಡು ಸ್ನೇಹಿತರಿಬ್ಬರು ಕಗ್ಗೊಲೆ..!

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ತಡರಾತ್ರಿ ಅಜಂತಾ ಹೋಟೆಲ್​ ಬಳಿ ಗೆಳೆಯರಿಬ್ಬರ ಡಬಲ್ ಮರ್ಡರ್ ಆಗಿದ್ದು, ಜನ ಬೆಚ್ಚಿಬಿದ್ದಾರೆ. ಸ್ನೇಹಿತರ ಮಧ್ಯೆ ಮೂಡಿದ್ದ ಹಳೆಯ ದ್ವೇಷವೇ ಗಲಾಟೆಗೆ ಕಾರಣ ಎನ್ನಲಾಗಿದೆ.

ಗಲಾಟೆಯಲ್ಲಿ ಇಬ್ಬರು ಚಾಕುವಿನಿಂದ ಇರಿದುಕೊಂಡು ಕೊಲೆಯಾಗಿದ್ದಾರೆ ಎನ್ನಲಾಗಿದೆ. ಇನ್ನು ಹತ್ಯೆಯಾದವರನ್ನು ಕೇಶ್ವಾಪುರ ನಿವಾಸಿ 23 ವರ್ಷದ ರಿಯಾಜ್ ಸವಣೂರು, ಮಂಟೂರು ರಸ್ತೆಯ ಮಿಲತ್ ನಗರ ನಿವಾಸಿ ಫಿರೋಜ್ ಹನಸಿ ಎಂದು ಗುರುತಿಸಲಾಗಿದೆ. ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಸ್ನೇಹಿತರ ಮಧ್ಯೆ ಕಳೆದ ಎರಡು ತಿಂಗಳಿಂದ ವೈಮನಸ್ಸು ಬೆಳೆದುಕೊಂಡಿತ್ತು. ಇದೇ ದ್ವೇಷವನ್ನು ಇಟ್ಟುಕೊಂಡು ಕೊಲೆ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ಪೊಲೀಸ್​ ಆಯುಕ್ತ ಎಮ್​.ಎನ್​. ನಾಗರಾಜ್​, ಕಿಮ್ಸ್​ ಆಸ್ಪತ್ರೆಯ ಶವಾಗಾರಕ್ಕೆ ಭೇಟಿ ನೀಡಿ, ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ಕೊಲೆಯಾದ ಇಬ್ಬರು ಸ್ನೇಹಿತರು ತಡರಾತ್ರಿ ನಡೆದ ಗಲಾಟೆಯಲ್ಲಿ ಪರಸ್ಪರ ಚಾಕು ಇರಿದುಕೊಂಡಿದ್ರು. ಈ ದುರ್ಘಟನೆಯಲ್ಲಿ ಮೂವರು ಯುವಕರು ಭಾಗಿಯಾಗಿದ್ದು. ವಾಸ್ಸಿಂ ಹಾಗೂ ಅಖಿಲ್ ಸೇರಿದಂತೆ ಇನ್ನೊಬ್ಬ ಯುವಕ ಕೂಡಾ ಇದ್ದಾನೆ.  ಕೂಡಲೇ ಅವನನ್ನು ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv