ಉಚಿತ ಬಸ್‌ಪಾಸ್‌ಗೆ ಆಗ್ರಹಿಸಿ ಟೌನ್‌ಹಾಲ್‌ನಲ್ಲಿ ಪ್ರತಿಭಟನೆ

ಬೆಂಗಳೂರು: ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ನೀಡಿದ್ದಕ್ಕೆ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಸರ್ಕಾರದ ವಿರುದ್ಧ ವಿದ್ಯಾರ್ಥಿಗಳ ಸರ್ಕಾರದ ವಿರುದ್ಧ ಗರಂ ಆಗಿದ್ದು, ಇವತ್ತು ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಹಿಂದಿನ ಸಿದ್ದರಾಮಯ್ಯ ಸರ್ಕಾರ ವಿದ್ಯಾರ್ಥಿಗಳಿಗೆ ಉಚಿತ ಪಾಸ್​ ನೀಡುವುದಾಗಿ ಹೇಳಿ ಈ ಬಗ್ಗೆ ಬಜೆಟ್​ನಲ್ಲೂ ಪ್ರಸ್ತಾಪಿಸಿತ್ತು, ಆದರೆ ಮೈತ್ರಿ ಸರ್ಕಾರದಲ್ಲಿ ಇದು ಸಾಧ್ಯವಾಗದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮೈತ್ರಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಬೃಹತ್ ಱಲಿ ಕೂಡ ನಡೆಸಲಿದೆ. ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆಯೊಂದಿಗೆ ಎಐಡಿಎಸ್​ಓ, ಎಐಡಿವೈಓ ಮತ್ತು ಎಐಎಂಎಸ್​ಎಸ್​ ಸಂಘಟನೆಗಳು ಕೈಜೋಡಿಸಲಿವೆ. ಶುಲ್ಕ ಪಡೆದು ವಿತರಿಸಿದ ಪಾಸ್​ಗಳನ್ನು ಹಿಂಪಡೆದು ಹಣವನ್ನು ವಾಪಸ್​ ನೀಡಬೇಕು ಎಂದು ಬೇಡಿಯನ್ನಿಟ್ಟಿದ್ದಾರೆ.