ಕಾಡುಪ್ರಾಣಿಗಳನ್ನ ಬೇಟೆಯಾಡುತ್ತಿದ್ದ ನಾಲ್ವರ ಬಂಧನ

ರಾಮನಗರ: ಕಾಡು ಪ್ರಾಣಿಗಳನ್ನ ಬೇಟೆಯಾಡುತ್ತಿದ್ದ ನಾಲ್ವರನ್ನ ಹಾರೋಹಳ್ಳಿ ವಲಯ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಗಿರಿತಿಮ್ಮಯ್ಯ, ಕಾಳಮಾರಯ್ಯ, ಚಿಕ್ಕಪುಟ್ಟಯ್ಯ, ಸುರೇಶ್ ಬಂಧಿತರು. ಬಂಧಿತರಿಂದ ಮೊಲ, ಎರಡು ಮೊಸಳೆ ವಶಪಡಿಸಿಕೊಳ್ಳಲಾಗಿದೆ.
ಮೊಲ ಮತ್ತು ಮೊಸಳೆಯನ್ನ ಹಿಡಿದು, ಮರಾಟಕ್ಕೆ ಮುಂದಾದ ವೇಳೆ ಖದೀಮರು ಅರಣ್ಯಾಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದಾರೆ. ಸದ್ಯ ಬಂಧಿತ ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಹಾರೋಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firtsnews.tv