ಕೃಷ್ಣಾ ನದಿಯಲ್ಲಿ ನೀರಿಲ್ಲ, ದಡಕ್ಕೆ ಬಂದ ಮೊಸಳೆ ಮರಿಗಳು..!

ಬೆಳಗಾವಿ: ಜಿಲ್ಲೆಯ ಕೃಷ್ಣಾ ನದಿಯಲ್ಲಿನ‌ ನೀರಿನ ಪ್ರಮಾಣ ಕಡಿಮೆಯಾದ ಹಿನ್ನೆಲೆ, ನದಿ ದಡದಲ್ಲಿ ಮೊಸಳೆ ಮರಿಗಳು ಪತ್ತೆಯಾಗಿವೆ. ರಾಯಭಾಗ ತಾಲೂಕಿನ‌ ಗುಂಡವಾಡ ಗ್ರಾಮ ಬಳಿ ಕೃಷ್ಣಾ ನದಿಯ ದಡದಲ್ಲಿ ನಾಲ್ಕು ಮೊಸಳೆ ಮರಿಗಳು ಮತ್ತು ಎರಡು ಮೊಟ್ಟೆ ಪ್ರತ್ಯಕ್ಷವಾಗಿವೆ. ಸದ್ಯ ಮೊಸಳೆ ಮರಿ, ಮೊಟ್ಟೆಗಳನ್ನು ಸ್ಥಳೀಯರು ಹಿಡಿದಿದ್ದು, ಅವುಗಳನ್ನು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. ಇನ್ನು ಮರಿ ಹಾಕಿದ ತಾಯಿ ಮೊಸಳೆ ಭೀತಿಯಿಂದ ನದಿ ಪಾತ್ರದ ಗ್ರಾಮದ ಜನ ಆತಂಕಗೊಂಡಿದ್ದಾರೆ. ಕುಡಚಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv