ಮತ ಕೇಳಲು ಹೋದ ಶಾಸಕನಿಗೆ ಗ್ರಾಮಸ್ಥರ ತರಾಟೆ!

ಬಳ್ಳಾರಿ: ಸಂಡೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಈ. ತುಕಾರಾಂ ಇಂದು ಮತಯಾಚನೆಗೆ ತೆರಳಿದ್ದಾಗ ಗ್ರಾಮಸ್ಥರಿಂದ ತೀವ್ರ ತರಾಟೆಗೊಳಗಾಗಿದ್ದಾರೆ. ಸಂಡೂರು ತಾಲೂಕಿನ ಚಿಕ್ಕಂತಾಪುರ ಗ್ರಾಮದಲ್ಲಿ ಪ್ರಚಾರದ ವೇಳೆ ಗ್ರಾಮಸ್ಥರು ಯಾವುದೇ ಮೂಲ ಸೌಕರ್ಯ ಒದಗಿಸಿಲ್ಲ ಅಂತಾ ಆರೋಪಿಸಿ ತರಾಟೆಗೆ ತೆಗೆದುಕೊಂಡರು.