’ತಾನೇ ಬೆಳೆದ ಬೆಳೆಯನ್ನು ಕಿತ್ತು ಬಿಸಾಡಿದ ಅನ್ನದಾತ’

ದಾವಣಗೆರೆ : ದಾವಣಗೆರೆಯಲ್ಲಿ ಸೌತೆಕಾಯಿ ಫಸಲು ಚೆನ್ನಾಗಿ ಬಂದರೂ ಕೆ.ಜಿ. ಸೌತೆಕಾಯಿಗೆ ಕೇವಲ 2 ರೂಪಾಯಿ ಇರುವುದರಿಂದ ಫಸಲನ್ನೆ ಅನ್ನದಾತ ಕಿತ್ತೆಸೆದಿದ್ದಾನೆ. ಹರಿಹರ ತಾಲೂಕಿನ ಹೊಳೆಸಿರಿಗೆರೆ ಗ್ರಾಮದ ರೈತ ಹಾಳೂರು ನಾಗರಾಜ್ ತನ್ನ ಹೊಲದಲ್ಲಿನ ಸೌತೆಕಾಯಿ ಫಸಲನ್ನು ಕಿತ್ತು ಹಾಕಿದ್ದಾರೆ. ಫಸಲು ಕಟಾವು ಮಾಡಿದರೂ ಕೂಲಿಗಳಿಗೆ ಹಣ ಕೊಡಲು ಆಗದ ಕಾರಣ ತಾನೇ ಬೆಳೆದ ಬೆಳೆಯನ್ನು ಕಿತ್ತಾಕಿ ರೈತ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv