‘ನಾನು ಕಾಂಗ್ರೆಸ್​​​ನಲ್ಲೇ ಇದ್ದವನು, ನಿಜಲಿಂಗಪ್ಪ ಟಿಕೆಟ್ ನೀಡಿಲ್ಲ ಅಂತಾ ಹೊರಬಂದೆ’

ಮಂಡ್ಯ: ರಾಜಕೀಯದಲ್ಲಿ 60 ವರ್ಷ ಕೆಲಸ ಮಾಡಿದ್ದೇನೆ. ಮೋದಿ ಅಧಿಕಾರಕ್ಕೆ ಬಂದು 5 ವರ್ಷ ಆಯ್ತು. ಅಧಿಕಾರ ಪಡೆದ ಅಹಂನಲ್ಲಿ ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇನೆ ಅಂತಾ ಮೋದಿ ಹೇಳುತ್ತಿದ್ದಾರೆ. ನಾನು ಕಾಂಗ್ರೆಸ್​​​ನಲ್ಲೇ ಇದ್ದವನು, ನಿಜಲಿಂಗಪ್ಪ ಟಿಕೆಟ್ ನೀಡಿಲ್ಲ ಅಂತಾ ಹೊರಬಂದೆ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ.

ದುರಹಂಕಾರದ ವ್ಯಕ್ತಿ ಪ್ರಧಾನ ಮಂತ್ರಿ
ಜಿಲ್ಲೆಯ ಮಳವಳ್ಳಿಯಲ್ಲಿ ಜೆಡಿಎಸ್​-ಕಾಂಗ್ರೆಸ್​​​ ಜಂಟಿ ಸಭೆಯಲ್ಲಿ ಮಾತನಾಡಿದ ದೇವೇಗೌಡ, ಯಾವ ಕಾರಣಕ್ಕೆ ಮೈತ್ರಿ ಆಯ್ತು ಅನ್ನೋದನ್ನ ನೋವಿನ ಮನಸ್ಸಿನಿಂದ ಹೇಳ್ತೀನಿ. ಸ್ವತಂತ್ರ ತಂದು ಕೊಟ್ಟ ಕಾಂಗ್ರೆಸ್​ ಅನ್ನು ಸಂಪೂರ್ಣ ನಾಶ ಮಾಡುತ್ತೇನೆ ಎನ್ನುವಾಗ.. ಆ ದುರಹಂಕಾರದ‌ ಮಾತುಗಳನ್ನ ಕೇಳಿದ್ದೆ. ಪಾರ್ಲಿಮೆಂಟ್‌ನಲ್ಲಿ ಮಾತನಾಡಲಿಕ್ಕೆ ನನಗೆ ಅವಕಾಶ ಕೊಟ್ಟಿರಲಿಲ್ಲ. ಆಗ ಸ್ಪೀಕರ್ ಬಳಿ ಹೋಗಿ ಒಂದು ಅವಕಾಶ ನೀಡಿ ಮತ್ತೆ ನಾನು ಪಾರ್ಲಿಮೆಂಟ್‌ಗೆ ಬರುತ್ತೇನೋ‌ ಇಲ್ವೋ ಗೊತ್ತಿಲ್ಲ ಎಂದಿದ್ದೆ. ಅವತ್ತು ಹಾಗೇ ಹೇಳಿದ್ದವನು ಇವತ್ತು ಸಿದ್ದರಾಮಯ್ಯ ಜತೆಗೂಡಿ ಬರೋದಕ್ಕೆ ಕಾರಣ. ದುರಹಂಕಾರದ ವ್ಯಕ್ತಿ ಪ್ರಧಾನ ಮಂತ್ರಿ ಆಗಿದ್ದಾರೆ. ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇನೆ ಅಂತಾರೆ. ಹೀಗಾದರೆ ನಮ್ಮಂತ ಸಣ್ಣ ಸಣ್ಣ ಪಾರ್ಟಿ ಉಳಿಯಲು ಸಾಧ್ಯವೇ? ಹಾಗಾಗಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಉಳಿದೆಲ್ಲರನ್ನೂ ಜೊತೆಗೂಡಿಸಿದ್ದಾರೆ. ಪಾರ್ಲಿಮೆಂಟ್‌ನಲ್ಲಿ ಒಂದು ದಿನ ರೈತರ ಬಗ್ಗೆ ಮಾತನಾಡದ ಮೋದಿ, ಚುನಾವಣೆ ಸಂಧರ್ಭದಲ್ಲಿ ₹ 6 ಸಾವಿರ ಘೋಷಿಸಿದ್ದಾರೆ. ಏನು ಸಿಗುತ್ತೆ ₹ 6 ಸಾವಿರದಲ್ಲಿ..? ಈ ವಯಸ್ಸಿನಲ್ಲಿ ಚುನಾವಣೆಗೆ ಹೋಗಬಾರದು ಎಂದು ಕೊಂಡಿದ್ದ ನಾನು, ಮೋದಿ ಅವರ ದುರಹಂಕಾರದ ಮಾತು ಕೇಳಿ. ನನಗೆ ಇನ್ನೂ ಪಾರ್ಲಿಮೆಂಟ್‌ನಲ್ಲಿ ಹೋರಾಡುವ ಶಕ್ತಿ ಇದೆ ಎಂದು, ಸಿದ್ದರಾಮಯ್ಯಗೆ ನಡೆ ಹೋಗೋಣ ಎಂದೆ. ಕಳೆದ ಮೂರ್ನಾಲ್ಕು ದಿನದಿಂದ ನಾನು-ಸಿದ್ದರಾಮಯ್ಯ ಎಲ್ಲಾ ಕಡೆ ಓಡಾಡ್ತ ಇದ್ದೇವೆ. ದೇಶಕ್ಕಾಗಿ ಸಣ್ಣ ಪುಟ್ಟ ವ್ಯತ್ಯಾಸ ಮರೆಯಿರಿ. ಅವರು ಅಬ್ಬರದ ಪ್ರಚಾರ ಮಾಡಲಿ. ಮೋದಿ ಬರಿ ಸುಳ್ಳು ಸುಳ್ಳು ಸುಳ್ಳು. ನಿಖಿಲ್ ಇನ್ನೂ ಯುವಕ. ಜಿಲ್ಲೆಯ ಶಾಸಕರು ನಿಖಿಲ್ ಸ್ಪರ್ಧೆಗೆ ಒತ್ತಾಯಿಸಿದ್ರು. ಎಲ್ಲರಿಗೂ ಗೌರವ ಕೊಡುವ ವಿನಯ ಅವನಲ್ಲಿದೆ. ನಿಖಿಲ್‌ರನ್ನ ಗೆಲ್ಲಿಸಿ. ಅಂಬರೀಶ್ ರಾಮನಗರದಲ್ಲಿ ಸೋತಾಗ. ಅಂಬರೀಶ್‌‌ ಪಾರ್ಲಿಮೆಂಟ್​​​ಗೆ ಕಳುಹಿಸಿದ್ದು ನಾವು. ಅಂಬರೀಶ್ ಏನು ಕೆಲಸ‌ ಮಾಡಿದ್ರು ಅನ್ನೋದರ ಬಗ್ಗೆ ಚರ್ಚೆ ಬೇಡ ಎಂದು ಮಾತು ಮುಗಿಸಿದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv