ಪಂಚಲೋಹದಿಂದ ಸಿದ್ಧವಾಯ್ತು ದೇವೇಗೌಡರ ಪ್ರತಿಮೆ, ಉದ್ಘಾಟನೆಗೆ ದಿನಗಣನೆ..!

ರಾಮನಗರ:  ದೇಶದ ಮೊದಲ ಗೃಹ ಸಚಿವ ಹಾಗೂ ಭಾರತವನ್ನು ಒಂದುಗೂಡಿಸಿದ್ದ ಸರ್ದಾರ್ ವಲ್ಲಭ ಭಾಯ್ ಪಟೇಲರ ಅತ್ಯಂತ ಎತ್ತರದ ಮೂರ್ತಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಇತ್ತೀಚೆಗಷ್ಟೇ ಲೋಕಾರ್ಪಣೆ ಮಾಡಿದ್ರು. ಅದರ ಬೆನ್ನಲ್ಲೇ ನಮ್ಮ ರಾಜ್ಯದಲ್ಲೂ ಒಂದು ಮೂರ್ತಿ ಸಿದ್ಧವಾಗಿದ್ದು, ಉದ್ಘಾಟನೆಗೆ ದಿನಗಣನೆ ಆರಂಭವಾಗಿದೆ.

ಹೌದು,  ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪ್ರತಿಮೆಯನ್ನು ಪಂಚಲೋಹಗಳಿಂದ ರಾಮನಗರದ ಅಭಿಮಾನಿಗಳು ಸ್ಥಾಪಿಸುತ್ತಿದ್ದಾರೆ. ಚನ್ನಪಟ್ಟಣದ ದೇವೇಗೌಡರ ಅಭಿಮಾನಿಗಳು, ತಾಲೂಕಿನ ಸಾಮಂದಿ ಗ್ರಾಮದಲ್ಲಿ ಪ್ರತಿಮೆಯನ್ನು ನಿರ್ಮಿಸುತ್ತಿದ್ದಾರೆ.

ಬಿಡದಿ ಬಳಿಯಿರುವ ಚಂದ್ರಿಕಾ ಜ್ಯುವೆಲ್ಲರಿ ಹಾಗೂ ಶಿಲ್ಪಕಲಾ ಸಂಸ್ಥೆ ದೇವೇಗೌಡರ ಪ್ರತಿಮೆಯನ್ನು ನಿರ್ಮಿಸುತ್ತಿದ್ದಾರೆ. ಚಂದ್ರಿಕಾ ಜ್ಯುವೆಲ್ಲರಿ ಹಾಗೂ ಶಿಲ್ಪಕಲಾ ಸಂಸ್ಥೆಯೂ ಸತತ ಒಂದು ವರ್ಷದಿಂದ ಪ್ರತಿಮೆ ನಿರ್ಮಿಸುತ್ತಿದೆ. ಪಂಚಲೋಹದಿಂದ ಸಿದ್ಧಗೊಳ್ಳುತ್ತಿರುವ ಪ್ರತಿಮೆಯೂ 450 ರಿಂದ 500 ಕೆಜಿ ತೂಕ ಹೊಂದಿದೆ. 3 ಜನ ಶಿಲ್ಪಿಗಳು ಹಾಗೂ 10 ಜನ ಸಹಾಯಕರಿಂದ ಕಂಚಿನ ಪ್ರತಿಮೆ ನಿರ್ಮಾಣಗೊಳ್ಳುತ್ತಿದೆ. ಇದೇ ನವೆಂಬರ್​​ 24ರಂದು ಸಾಮಂದಿ ಗ್ರಾಮದಲ್ಲಿ ಪ್ರತಿಮೆ ಅನಾವರಣಗೊಳ್ಳಲಿದೆ.