ಮೋದಿಗೆ ಸೂಕ್ಷ್ಮವಾಗಿ ಉತ್ತರ ಕೊಡುವ ತಾಕತ್ತು ರೈತ ಮಗನಾದ ನನಗಿದೆ -ದೇವೇಗೌಡ

ಮೈಸೂರು: ಮೋದಿ ವಂಶಪಾರಂಪರ್ಯ ರಾಜಕೀಯ ವಿಚಾರವಾಗಿ ಮಾತಾಡಿದ್ದಾರೆ. ದೇವೇಗೌಡರು ಸನ್ಯಾಸತ್ವ ತಗೆದುಕೊಳ್ಳಬೇಕು ಅಂದಿದ್ದಾರೆ. ಮೋದಿಗೆ ಸೂಕ್ಷ್ಮವಾಗಿ ಉತ್ತರ ಕೊಡುವ ತಾಕತ್ತು ರೈತನ ಮಗನಾದ ನನಗಿದೆ. ಮೋದಿಯ ದುಷ್ಟ ರಾಜಕಾರಣ ನನಗೆ ಗೊತ್ತಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ‌. ದೇವೇಗೌಡ ಹೇಳಿದ್ದಾರೆ.

ನಗರದಲ್ಲಿ ನಡೆದ ಜೆಡಿಎಸ್​​​-ಬಿಜೆಪಿ ಜಂಟಿ ಸಮಾವೇಶದಲ್ಲಿ ಮಾತನಾಡಿದ ಹೆಚ್.ಡಿ‌. ದೇವೇಗೌಡ, ಯುವಕರು ಇದರ ಬಗ್ಗೆ ತಿಳಿದುಕೊಳ್ಳಬೇಕು. ಯುವಕರು ಸೋಷಿಯಲ್ ಮೀಡಿಯಾದಲ್ಲಿ‌ ಮೋದಿಯ ವರ್ಣ‌ನೆ ಮಾಡ್ತಾರೆ. ದೃಶ್ಯ ಮಾಧ್ಯಮಗಳು ಸಹ ಇದರಿಂದ ಹೊರತಾಗಿಲ್ಲ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದ್ರೆ ನಾವು ಅದನ್ನು ಮುಂದಿನ ಪೀಳಿಗೆಗೆ ಮಾಡಿದ ಮೋಸ. ರಾಜ್ಯದಲ್ಲಿ ಮೈತ್ರಿ ಸರ್ಕಾರ ಬಂದಾಗಿನಿಂದ ನಾವು ಕೋಮುವಾದಿ ಪಕ್ಷ ಸೋಲಿಸಲು ತೀರ್ಮಾನ ಮಾಡಿದ್ದೇವೆ. ಬಿಜೆಪಿಯನ್ನು ಸೋಲಿಸುವ ಕೆಲಸ ಕರ್ನಾಟಕದಿಂದ ಶುರುವಾಗಿದೆ. ಮೈತ್ರಿ ಸರ್ಕಾರದ ಪ್ರತಿಜ್ಞಾವಿಧಿ ತೆಗೆದುಕೊಂಡಾಗ 20 ರಾಜ್ಯಗಳ ಮುಖ್ಯಮಂತ್ರಿಗಳು ಬಂದಿದ್ದರು. ರಾಷ್ಟ್ರದಲ್ಲಿ ಬಿಜೆಪಿಯನ್ನು ಸೋಲಿಸಲು ನಾವು ಸಣ್ಣಪುಟ್ಟ ಸಮಸ್ಯೆಗಳಿದ್ರೂ ಮರೆತು ಒಂದಾಗಬೇಕು ಎಂದರು.  ವೇದಿಕೆಯಲ್ಲಿಯೇ ಸಚಿವ ಜಿ.ಟಿ.ದೇವೇಗೌಡ, ‌ಜೆಡಿಎಸ್ ಶಾಸಕರಿಗೆ ಮೈತ್ರಿ ಅಭ್ಯರ್ಥಿ ಗೆಲುವಿಗೆ ಕೆಲಸ‌ ಮಾಡುವಂತೆ ಸೂಚನೆ ನೀಡಿದರು. ಯಾವುದೇ ಕಾರಣಕ್ಕೂ‌ ಮೋಸ ಮಾಡದೆ ಕೆಲಸ ಮಾಡಬೇಕೆಂದು ದೇವೇಗೌಡ ಸೂಚನೆ ನೀಡಿದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv