ಬಿಎಸ್​ವೈ ಕೇರಳಕ್ಕೆ ಹೋಗಿದ್ದು ಅನುಮಾನ ಸೃಷ್ಟಿಸಿದೆ: ಬೇಳೂರು ಗೋಪಾಲಕೃಷ್ಣ

ಬೆಂಗಳೂರು: ಬಿಜೆಪಿಯವರು 2 ಬಾರಿ ಆಪರೇಷನ್ ಕಮಲ ಮಾಡಿ ಕೈಸುಟ್ಟುಕೊಂಡಿದ್ದಾರೆ. ಈಗ 3 ನೇ ಬಾರಿ ಕೇರಳಕ್ಕೆ ಹೋಗಿದ್ದಾರೆ. ಮಾಟ, ಮಂತ್ರ ಮಾಡೋಕೆ ಹೋಗಿದ್ದಾರೆನೋ ಗೊತ್ತಿಲ್ಲ ಅಂತಾ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಪರೋಕ್ಷವಾಗಿ ಬಿಎಸ್​ವೈರನ್ನ ಕುಟುಕಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಕಿಂಗ್​ ಪಿನ್​ಗಳೆಲ್ಲ ದುಬೈಗೆ ಹೋಗಿ ಸೇರಿಕೊಂಡಿದ್ದಾರೆ. ಈಗ ಆಪರೇಷನ್ ಕಮಲ ಮಾಡೋದಕ್ಕಾಗಿಯೇ ಕೇರಳಕ್ಕೆ ಹೋಗಿದ್ದಾರೆ. ಜಿಂದಾಲ್ ಹೋಗುವ ಬದಲು ಕೇರಳಕ್ಕೆ ಹೋಗಿದ್ದು ಅನುಮಾನ ಸೃಷ್ಟಿಸಿದೆ ಅಂತಾ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ರು.