ಧಾರವಾಡದಿಂದ ವಿನಯ್​ ಕುಲಕರ್ಣಿಗೆ ‘ಕೈ’ ಟಿಕೆಟ್​ ಫೈನಲ್​​

ಧಾರವಾಡ: ಧಾರವಾಡ ಲೋಕಸಭಾ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಸಚಿವ ವಿನಯ್​ ಕುಲಕರ್ಣಿ ಕಣಕ್ಕಿಳಿದಿದ್ದಾರೆ. ನಿನ್ನೆ ಪ್ರಕಟವಾದ ಕಾಂಗ್ರೆಸ್​ ಪಟ್ಟಿಯಲ್ಲಿ ವಿನಯ್​ ಕುಲರ್ಣಿಗೆ ಟಿಕೆಟ್​​ ಘೋಷಣೆಯಾಗಿದೆ. ವಿನಯ್​ ಕುಲಕರ್ಣಿ ಅಧಿಕೃತವಾಗಿ ಬಿ. ಫಾರಂ ಪಡೆದು ಗುರುವಾರ ನಾಮಪತ್ರ ಸಲ್ಲಿಸಲಿದ್ದಾರೆ. ಈ ಕುರಿತು ನಿನ್ನೆ ಮಾತನಾಡಿದ್ದ ಅವರು, ಕಾಂಗ್ರೆಸ್​ನಿಂದ ಅಧಿಕೃತವಾಗಿ ಬಿ. ಫಾರಂ ಇನ್ನೂ ಸಿಕ್ಕಿಲ್ಲ. ಆದ್ರೆ ದಾಖಲೆಗಳನ್ನು ತಯಾರಿ ಮಾಡಿಟ್ಟುಕೊಳ್ಳುವಂತೆ ಹೇಳಿದ್ದಾರೆ ಎಂದಿದ್ದರು. ಅದರಂದೆ ನಿನ್ನೆ ಪ್ರಕಟವಾಗಿರುವ ಕೈ ಪಟ್ಟಿಯಲ್ಲಿ ವಿನಯ್​ ಹೆಸರು ಅಧಿಕೃತವಾಗಿ ಘೋಷಣೆಯಾಗಿದೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv