ಮಾಜಿ ಸಚಿವ ಬಿ.ಎ ಮೊಹಿದ್ದೀನ್ ನಿಧನ: ಗೆಳೆಯನ ನಿಧನದಿಂದಾಗಿ ಕಣ್ಣೀರು ಹಾಕಿದ ಸ್ಪೀಕರ್

ಬೆಂಗಳೂರು: ಕಾಂಗ್ರೆಸ್, ಮುಖಂಡ ಮಾಜಿ ಸಚಿವ ಬಿ.ಎ ಮೊಹಿದ್ದೀನ್ ನಿಧನದ ಹಿನ್ನಲೆ ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್ ಕಣ್ಣೀರು ಹಾಕಿದ್ದಾರೆ. ಗೆಳೆಯನ ನಿಧನದಿಂದ ಭಾವುಕರಾದ ಸ್ಪೀಕರ್ ರಮೇಶ್ ಕುಮಾರ್, ಸಂಜಯನಗರದ ನಿವಾಸಕ್ಕೆ ಬಂದು ಅಂತಿಮ ದರ್ಶನ ಪಡೆದು ಅಗಲಿದ ನಾಯಕನಿಗಾಗಿ ಕಂಬನಿ ಮಿಡಿದಿದ್ದಾರೆ. ಇದೇ ವೇಳೆ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಸೇರಿದಂತೆ ಹಲವು ಮುಖಂಡರು ಅಂತಿಮ ದರ್ಶನ ಪಡೆದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv