ಜೆಡಿಎಸ್​ಗೆ ನಿರೀಕ್ಷಿಸಿದಷ್ಟು ಸೀಟು ಬರಲಿಲ್ಲ ಎಂದು ಕಣ್ಣೀರಿಟ್ಟ ಚನ್ನಿಗಪ್ಪ

ತುಮಕೂರು: ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ನಿರೀಕ್ಷಿತ ಸಾಧನೆ ಮಾಡಿಲ್ಲ ಅಂತಾ ಮಾಜಿ ಸಚಿವ ಹಾಗೂ ಜೆಡಿಎಸ್​ ಜಿಲ್ಲಾಧ್ಯಕ್ಷ ಸಿ.ಚನ್ನಿಗಪ್ಪ ಕಣ್ಣೀರಿಟ್ಟ ಪ್ರಸಂಗ ಇಂದು ತುಮಕೂರಿನಲ್ಲಿ ನಡೆದಿದೆ.
ಜೆಡಿಎಸ್​ನಿಂದ ಆಯ್ಕೆಯಾಗಿರುವ ನೂತನ ಶಾಸಕ, ಸಚಿವರಿಗಾಗಿ ಅಭಿನಂದನಾ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಜೆಡಿಎಸ್ ಭದ್ರಕೋಟೆಯಾಗಿದ್ದ ತುಮಕೂರಲ್ಲಿ 11 ವಿಧಾನ ಸಭಾ ಕ್ಷೇತ್ರಗಳಿವೆ. ಇವುಗಳಲ್ಲಿ 11 ಸ್ಥಾನಗಳನ್ನೂ ಗೆಲ್ಲುವ ಗುರಿಹೊಂದಲಾಗಿತ್ತು. ಆದರೆ, ಅದು ಕೈಗೂಡಲಿಲ್ಲ ಅಂತಾ ಭಾವುಕರಾಗಿದ್ದಾರೆ. ಜಿಲ್ಲೆಯಲ್ಲಿ ನಾವು ಕೇವಲ 04 ಸ್ಥಾನಗಳನ್ನು ಮಾತ್ರ ಗೆಲ್ಲುವಂತಾಯಿತು. ಇದು ನಮ್ಮ ಕಳಪೆ ಸಾಧನೆ ಎಂದು ಚನ್ನಿಗಪ್ಪ ವ್ಯಾಖ್ಯಾನಿಸಿದ್ದಾರೆ. ಅಲ್ಲದೇ, ಜಿಲ್ಲೆಗೆ ಸಚಿವ ಸ್ಥಾನ ನೀಡುವಲ್ಲೂ ಅನ್ಯಾಯವಾಗಿದೆ. ಜಿಲ್ಲೆಗೆ ಎರಡು ಸಚಿವ ಸ್ಥಾನ ನೀಡುವಂತೆ ಕೋರಿಕೊಂಡಿದ್ವಿ. ಅದರಲ್ಲೂ ಮೊದಲ ಆದ್ಯತೆಯನ್ನು ಶಿರಾ ಶಾಸಕ ಬಿ.ಸತ್ಯನಾರಾಯಣ ನೀಡಬೇಕು ಅಂದಿದ್ವಿ. ಅವರಿಗೆ ಸಚಿವ ಸ್ಥಾನ ನೀಡದೇ ಇರುವುದು ತುಂಬಾ ನೋವು ತಂದಿದೆ ಎಂದು ಚನ್ನಿಗಪ್ಪ ಹೇಳಿದ್ದಾರೆ.
ಕೊರಟಗೆರೆಯಲ್ಲಿ ಸುಧಾಕರ್ ಲಾಲ್ ಸೋಲಬಾರದಿತ್ತು
ಕೊರಟಗೆರೆ ಮಾಜಿ ಶಾಸಕ ಸುಧಾಕರ್ ಲಾಲ್ ಸೋಲಿಗೆ ತೀವ್ರ ಬೇಸರವ್ಯಕ್ತಪಡಿಸಿದ ಚನ್ನಿಗಪ್ಪ, ಪುಣ್ಯಾತ್ಮ ಕ್ಷೇತ್ರದಲ್ಲಿ ಒಳ್ಳೆ ಕೆಲಸ ಮಾಡಿದ್ದ. ಕೊರಟಗೆರೆಯಲ್ಲಿ ಸುಧಾಕರ್ ಲಾಲ್ ಸೋಲಬಾರದಿತ್ತು ಎಂದಿದ್ದಾರೆ. ಈ ಹಿಂದೆ ಸುಧಾಕರ್ ಲಾಲ್ ಸೋಲಿಗೆ ಸ್ವತ ಚನ್ನಿಗಪ್ಪರೇ ಗೇಮ್ ಪ್ಲ್ಯಾನ್ ಮಾಡಿದ್ದಾರೆ ಅನ್ನೋ ಆರೋಪವೂ ಕೇಳಿಬಂದಿತ್ತು. ಡಾ.ಜಿ.ಪರಮೇಶ್ವರ್ ಜೊತೆ ಸೇರಿ ಸುಧಾಕರ್ ಲಾಲ್ ಸೋಲಿಸಿದ್ದಾರೆ ಅಂತಾನೂ ಕ್ಷೇತ್ರದ ಜನ ಮಾತನಾಡಿಕೊಂಡಿದ್ದು ಓಪನ್ ಸೀಕ್ರೆಟ್.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv