ಮಾಜಿ ಸಚಿವ ಬಾಬುರಾವ್​ ಚಿಂಚನಸೂರ್​ರನ್ನ ಪೊಲೀಸ್​ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ​..!

ಬೆಂಗಳೂರು: ಚೆಕ್ ಬೌನ್ಸ್ ಪ್ರಕರಣದಲ್ಲಿ ಅರೋಪ ಎದುರಿಸುತ್ತಿರುವ ಮಾಜಿ ಸಚಿವ ಬಾಬುರಾವ್​ ಚಿಂಚನಸೂರ್ ಅವರನ್ನ ಜನಪ್ರತಿನಿಧಿಗಳ ನ್ಯಾಯಾಲಯ ಪೊಲೀಸ್​ ಕಸ್ಟಡಿಗೆ ನೀಡಿದೆ. ಅನೇಕ ಬಾರಿ‌ ನೊಟೀಸ್ ನೀಡಿದ್ರೂ ವಿಚಾರಣೆಗೆ ಗೈರಾಗಿದ್ದ ಹಿನ್ನೆಲೆಯಲ್ಲಿ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಇದೇ 8 ನೇ ತಾರೀಖು ಚಿಂಚನಸೂರ ವಿರುದ್ಧ ಕೋರ್ಟ್​ ವಾರೆಂಟ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಬಾಬುರಾವ್​ ಇಂದು ಕೇಸ್ ರಿ ಕಾಲ್ ಮಾಡಿಸಿಕೊಳ್ಳಲು ಬಂದಿದ್ದರು. ಈ ವೇಳೆ ನ್ಯಾಯಾಧೀಶ ರಾಮಚಂದ್ರ ಡಿ ಹುದ್ದಾರ್ ಪೊಲೀಸ್​ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದ್ದಾರೆ. ಪರಿಣಾಮ ಚಿಂಚನಸೂರರನ್ನ ಕಸ್ಟಡಿಗೆ ಪಡೆದ ಪೊಲೀಸರು ಕೋರ್ಟ್ ಆವರಣದಾಚೆ ಕೂರಿಸಿದ್ದಾರೆ. 2015 ರಲ್ಲಿ ಅಂಜನಾ ಎಂಬುವರು ಚೆಕ್ ಬೌನ್ಸ್​ ಕೇಸ್ ದಾಖಲಿಸಿದ್ದರು. ಬಾಬುರಾವ್​ ಕೊಟ್ಟಿದ್ದ ₹11 ಕೋಟಿ 88 ಲಕ್ಷದ ಚೆಕ್ ಬೌನ್ಸ್ ಆಗಿತ್ತು ಎಂದು ಆರೋಪಿಸಿದ್ದರು. ಈ ಸಂಬಂಧ ಮ್ಯಾಜಿಸ್ಟ್ರೇಟ್ ಕೋರ್ಟ್​ನಲ್ಲಿ ಪಿಸಿಆರ್ ಫೈಲ್ ಮಾಡಿದ್ದರು. ಈ ಪ್ರಕರಣದ ವಿಚಾರಣೆಗೆ ಇಂದು ಬಾಬುರಾವ್​ ಕೋರ್ಟ್​ಗೆ ಆಗಮಿಸಿದ್ದರು. ಇನ್ನು ಸಂಜೆಯ ವರೆಗೂ ಚಿಂಚನಸೂರ ಪೊಲೀಸ್ ಕಸ್ಟಡಿಯಲ್ಲಿರುವ ಸಾಧ್ಯತೆ ಇದೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv