ಸಮಾವೇಶದಲ್ಲಿ ಮಾಜಿ ಸಚಿವ ಆಂಜನೇಯರನ್ನ ಕಡೆಗಣಿಸಿದ್ರಾ ವರಿಷ್ಠರು..!?

ಚಿತ್ರದುರ್ಗ: ಕೋಟೆ ನಾಡಿನ ಕಾಂಗ್ರೆಸ್ ಸಮಾವೇಶದಲ್ಲಿ ಮಾಜಿ ಸಚಿವ ಎಚ್​​​. ಆಂಜನೇಯರನ್ನು ವರಿಷ್ಠರು ಕಡೆಗಣಿಸಿದಂತಹ ದೃಶ್ಯವು ಕಂಡು ಬಂದಿದೆ. ನಗರದಲ್ಲಿ ಇಂದು ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭಾಷಣದ ನಂತರ ದೋಸ್ತಿಗಳೆಲ್ಲ ಒಗ್ಗಟ್ಟು ಪ್ರದರ್ಶನಕ್ಕೆ ಮುಂದಾದ್ರು. ಈ ವೇಳೆ ಆಂಜನೇಯರನ್ನ ಮಾಜಿ ಸಿಎಂ ಸಿದ್ದರಾಮಯ್ಯ ದೂರ ತಳ್ಳಿದರು. ಬಳಿಕ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಕೈ ಹಿಡಿಯಲು ಆಂಜನೇಯ ಮುಂದಾದ್ರು. ಆದ್ರೆ ಅವರು ಕೂಡಾ ಕೈ ಹಿಡಿಯದೇ ಮತ್ತೆ ದೂರ ತಳ್ಳಿದ್ರು. ಆಗ ಮುಂದೆ ಬಂದ ಡಿಕೆಶಿ ಕೈಹಿಡಿಯಲು ಹೋದ ಆಂಜನೇಯಗೆ ಅಲ್ಲಿಯೂ ನಿರಾಸೆ ಕಾದಿತ್ತು. ಡಿಕೆ ಶಿವಕುಮಾರ್ ಅವರೂ ಕೂಡ ಆಂಜನೇಯ ಕಡೆ ತಿರುಗಿ ನೋಡಲಿಲ್ಲ. ಸಾಲು ಸಾಲು ನಾಯಕರು ಆಂಜನೇಯರನ್ನು ತಮ್ಮ ಸಾಲಿನಿಂದ ದೂರವಿಟ್ಟಿದ್ದು ಸ್ಪಷ್ಟವಾಗಿತ್ತು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv