ಆರ್.ಅಶೋಕ್ ರೋಡ್ ಶೋ ವೇಳೆ ಜೆಡಿಎಸ್ ಪರ ಘೋಷಣೆ..!

ತುಮಕೂರು: ಇಂದು ಮಾಜಿ ಡಿಸಿಎಂ ಆರ್.ಅಶೋಕ್ ಭರ್ಜರಿ ರೋಡ್ ಶೋ ನಡೆಸಿ ಬಿಜೆಪಿ ಅಭ್ಯರ್ಥಿ ಜಿ.ಎಸ್ ಬಸವರಾಜು ಪರ ಮತಯಾಚನೆ ಮಾಡಿದರು. ತುಮಕೂರು ತಾಲೂಕು ಹೆಬ್ಬೂರು ಗ್ರಾಮದಲ್ಲಿ ರೋಡ್ ಶೋ ಮಾಡಿದರು. ಮಾಜಿ ಶಾಸಕ ಸುರೇಶ್ ಗೌಡ ಸೇರಿದಂತೆ ಬಿಜೆಪಿ ಮುಖಂಡರು ಭಾಗಿಯಾಗಿದ್ದರು.

ರೋಡ್ ಶೋ ವೇಳೆ ಜೆಡಿಎಸ್ ಪರ ಘೋಷಣೆ ಕೇಳಿ ಬಂದವು. ಜೆಡಿಎಸ್ ಕಾರ್ಯಕರ್ತರು ಮೈತ್ರಿ ಅಭ್ಯರ್ಥಿ ದೇವೇಗೌಡರ ಪರವಾಗಿ ಗೌಡರ ಗೌಡ ದೇವೇಗೌಡ ಎಂದು ಘೋಷಣೆ ಕೂಗಿದರು. ರೋಡ್ ಶೋ ಸಾಗುತ್ತಿರುವ ರಸ್ತೆ ಪಕ್ಕದಲ್ಲಿ ನಿಂತು ಕಾರ್ಯಕರ್ತರು ಘೋಷಣೆ ಕೂಗಿದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv