ಕಲಬುರ್ಗಿಯ ಹೊಟ್ಟೆ ಹಸಿದ ಹುಲಿ ಸಣ್ಣ ಬೇಟೆ ಮಾಡಲ್ಲ, ದೊಡ್ಡ ಬೇಟೆಯನ್ನೇ ಮಾಡುತ್ತೆ: ಕೆ.ಎಸ್.ಈಶ್ವರಪ್ಪ

ಕಲಬುರ್ಗಿ: ಹೊಟ್ಟೆ ಹಸಿದ ಹುಲಿ ಸಣ್ಣ ಬೇಟೆ ಮಾಡಲ್ಲ, ದೊಡ್ಡ ಬೇಟೆಯನ್ನೇ ಮಾಡುತ್ತೆ. 44 ಸ್ಥಾನವಿದ್ದು ವಿಪಕ್ಷ ಇಲ್ಲದಿದ್ದರೂ ವಿರೋಧ ಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನ ಬೇಟೆ ಮಾಡಲಿದೆ ಎಂದು ಮಾಜಿ‌ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಜಿಲ್ಲೆಯ ಹಿಂದುಳಿದ ವರ್ಗಗಳ ಮತಗಳನ್ನು ಸೆಳೆಯಲು‌ ಇಂದು ನಗರದ ವೀರಶೈವ ಕಲ್ಯಾಣ ಮಂಟಪ ಎದುರು ಬಿಜೆಪಿ ಹಿಂದುಳಿದ ವರ್ಗಗಳ ಸಮಾವೇಶ ಆಯೋಜನೆ ಮಾಡಲಾಗಿತು. ಸಮಾವೇಶದಲ್ಲಿ ಮಾತನಾಡಿದ ಕೆ.ಎಸ್.ಈಶ್ವರಪ್ಪ, ಕಲಬುರ್ಗಿಯಲ್ಲಿದ್ದ ಹಿಂದುಳಿದ ವರ್ಗದ ಜನರೆಲ್ಲಾ ಇಂದು ಇಲ್ಲಿಯೇ ಇದ್ದಾರೆ. ಆದರೆ ಕಾಂಗ್ರೆಸ್‌ನಲ್ಲಿರೋದು ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಮಗ ಅಷ್ಟೇ. ಹಿಂದುಳಿದ ವರ್ಗದವರಿಗೆ ಸಂವಿಧಾನಬದ್ಧ ಹಕ್ಕು ಬೇಕೆಂಬುದು ಸ್ವಾತಂತ್ರ್ಯ ಬಂದಾಗಿನಿಂದ ಇದ್ದ ಬೇಡಿಕೆ. ಆದರೆ ಹಿಂದುಳಿದ ವರ್ಗಗಳಿಗೆ ಸಂವಿಧಾನಬದ್ಧ ಹಕ್ಕು ನೀಡಲಿಲ್ಲ. ಹಿಂದುಳಿದ ವರ್ಗಗಳಿಗೆ ಸಂವಿಧಾನ ಬದ್ಧ ಹಕ್ಕು ನೀಡಲು ಪ್ರಧಾನಿ ಮೋದಿ ಬಿಲ್ ಪಾಸ್ ಮಾಡಿದ್ರು. ಲೋಕಸಭೆಯಲ್ಲಿ ಬಿಲ್ ಪಾಸ್ ಆದರೂ, ಕಾಂಗ್ರೆಸ್ ನವರು ಬಿಲ್ ಪಾಸ್ ಮಾಡಲು ಬೆಂಬಲ ಕೊಡಲಿಲ್ಲ. ಮಲ್ಲಿಕಾರ್ಜುನ ಖರ್ಗೆ ಉತ್ತರ ಕರ್ನಾಟಕ ಭಾಗದ ಜನಕ್ಕೆ ಏನು ಮಾಡಿದ್ದೀರಿ? ಇಷ್ಟು ಸಾರಿ ಗೆದ್ದು, ಹಲವು ಖಾತೆ ಸಚಿವರಾಗಿದ್ರಿ, ಕುಡಿಯಲು ನೀರು ಕೊಟ್ರಾ? ಹಿಂದುಳಿದ ವರ್ಗದವರು, ದಲಿತರ ಮಕ್ಕಳಿಗೆ ಶಿಕ್ಷಣ ಕೊಟ್ರಾ? ನಾಚಿಕೆಯಿಲ್ಲದೇ ಕಾಂಗ್ರೆಸ್ ಜೆಡಿಎಸ್ ಒಂದಾಗಿದೆ. ಕರ್ನಾಟಕದ 28 ಕ್ಷೇತ್ರದಲ್ಲಿ 22 ಸ್ಥಾನಗಳಲ್ಲಿ ನಾವು ಗೆಲ್ತೇವೆ ಅದರಲ್ಲಿ ನಂಬರ್ ಒನ್ ಕಲಬುರ್ಗಿ. ನಮ್ಮ ಡಾ.ಉಮೇಶ್ ಜಾಧವ್​​ರವರ ಬ್ಯಾಲೇಡ್​​​ನಲ್ಲೂ ಸಹ ನಂಬರ್ ಒನ್.  ಆಪರೇಷನ್ ಕಮಲ ಮಾಡಲು ಡಾ.ಜಾಧವ್‌ರನ್ನು ಬಾಂಬೆಗೆ ಕರೆದುಕೊಂಡು ಹೋಗಿದ್ದಾರೆ ಎಂದ್ರು. ಆದ್ರೆ ಕಾಂಗ್ರೆಸ್ ಹಿಂದುಳಿದವರಿಗೆ ಏನೂ ಮಾಡಿಲ್ಲ ಅಂತಾ ಪಕ್ಷದಿಂದ ಹೊರಬಂದ್ರು ಅವರಿಗೆ ನನ್ನ ಅಭಿನಂದನೆ.
ಇದು ಬೋಣಗೆ, ಚುನಾವಣೆ ಮುಗಿಯುತ್ತಿದ್ದಂತೆ ಬಿಜೆಪಿ ಸೇರಲು ಕ್ಯೂ ನಿಲ್ಲುತ್ತಾರೆ. ಡಾ.ಉಮೇಶ್ ಜಾಧವ್ ರಾಜೀನಾಮೆ ಅಂಗೀಕಾರ ಆಗಲ್ಲ ಅಂದಿದ್ದರು. ಆದರೆ ರಾಜೀನಾಮೆ ಅಂಗೀಕಾರ ಆಯ್ತು. ಸಿದ್ದರಾಮಯ್ಯ ಏನು ಆಗಲ್ಲ‌ ಅಂತಾರಲ್ಲೋ ಅದೆಲ್ಲಾ ಆಗುತ್ತೆ. ನಿಮ್ಮಪ್ಪರಾಣೆ ಹೆಚ್.ಡಿ.ಕುಮಾರಸ್ವಾಮಿ ಸಿಎಂ ಆಗಲ್ಲ ಅಂತಾ ಸಿದ್ದರಾಮಯ್ಯ ಹೇಳಿದ್ರು. ಸುಳ್ಳಿನ ಸರದಾರ ಸಿದ್ದರಾಮಯ್ಯ, ಸಿದ್ದರಾಮಯ್ಯ ಬಿಟ್ಟರೆ ಮಲ್ಲಿಕಾರ್ಜುನ ಖರ್ಗೆ. ಮುಸಲ್ಮಾನರಿಗೆ ಕಾಂಗ್ರೆಸ್ ಮೋಸ ಮಾಡಿದೆ ಅಂತಾ ಮಾಜಿ ಸಚಿವ ರೋಶನ್ ಬೇಗ್ ರವರೇ ಹೇಳಿದ್ರು. ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು ಎಲ್ಲರೂ ಬಿಜೆಪಿ‌ ಬೆಂಬಲಕ್ಕಿದ್ದಾರೆ ಎಂದರು.

ಚುನಾವಣೆ ಮುಗಿಯುತ್ತಿದ್ದಂತೆ ಅನೇಕ ಶಾಸಕರು ರಾಜೀನಾಮೆ ನೀಡ್ತಾರೆ. ಚುನಾವಣೆ ಮುಗಿಯುತ್ತಿದ್ದಂತೆ ಈ ಸರ್ಕಾರ ಬೀಳುತ್ತೆ. ಸಿದ್ದರಾಮಯ್ಯ ಯಾವುದು ಆಗೋದಿಲ್ಲಾ ಅಂತಾರೋ ಅದೇ ಆಗುತ್ತದೆ. ಮೋದಿ ಪ್ರಧಾನಿ ಆಗಲ್ಲಾ ಅಂದಿದ್ರು, ಮೋದಿ ಪ್ರಧಾನಿ ಆದ್ರು. ಕುಮಾರಸ್ವಾಮಿ ಅವರಪ್ಪನಾಣೆಗೂ ಮುಖ್ಯಮಂತ್ರಿ ಆಗಲ್ಲಾ ಅಂದ್ರು, ಅವರು ಮುಖ್ಯಮಂತ್ರಿ ಆದ್ರು. ಸಿದ್ದರಾಮಯ್ಯ ಸುಳ್ಳಿನ ಸರದಾರ. ಚಾಮುಂಡೇಶ್ವರಿ ಸಿದ್ದರಾಮಯ್ಯರನ್ನು ಸೋಲಿಸಿದ್ದ ಮಲ್ಲಿಕಾರ್ಜುನ ಖರ್ಗೆ ಮತ್ತು ಪರಮೇಶ್ವರ್. ನಿಂಬೆಹಣ್ಣಿನ ರೇವಣ್ಣ ಹೇಳ್ತಾರೆ 22 ಸೀಟ್ ಗೆಲ್ಲೇವೆ ಅಂತಾ. ಇಲ್ಲ ಅಂದ್ರೆ ರಾಜಕೀಯ ನಿವೃತ್ತಿ ತಗೆದುಕೊಳ್ಳುತ್ತೇನೆ ಅಂತಾ ಹೇಳ್ತಿದಾರೆ. ಇವರ ಅಪ್ಪನೂ ಹೀಗೇ ಹೇಳಿದ್ರು, ಮೋದಿ ಪ್ರಧಾನಿಯಾದ್ರೆ ದೇಶ ಬಿಟ್ಟು ಹೋಗ್ತೇವೆ ಅಂತಾ ಹೇಳಿದ್ರು. ಕೋಮುವಾದಿ ಬಿಜೆಪಿ ದೂರವಿಡಲು ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರ ಮಾಡಿದ್ವಿ ಅಂತಾರೆ. ಮಂಡ್ಯದಲ್ಲಿ ಸುಮಲತಾ ಗೌಡ್ತಿ ಅಲ್ಲ ನಾಯ್ಡು ಅಂತಾ ಹೇಳ್ತಾರೆ. ಯಾರು ಜಾತಿವಾದಿಗಳು ಯಾರೂ ಕೋಮುವಾದಿಗಳು ಎಂದು ಈಶ್ವರಪ್ಪ ಪ್ರಶ್ನೆ ಮಾಡಿದ್ದಾರೆ.

ಸಮಾವೇಶದಲ್ಲಿ ಬಿಜೆಪಿ ಮುಖಂಡರಾದ ಕೆ.ಪಿ.ನಂಜುಂಡಿ, ಎನ್.ರವಿಕುಮಾರ್, ಬಾಬುರಾವ್ ಚಿಂಚನಸೂರ್ ಭಾಗಿಯಾಗಿದ್ದರು.