ಮೋದಿ‌ ಪ್ರಣಾಳಿಕೆ, ಓಲ್ಡ್ ವೈನ್ ಇನ್ ನ್ಯೂ ಬಾಟೆಲ್: ಸಿದ್ದರಾಮಯ್ಯ

ಮೈಸೂರು: ಬಿಜೆಪಿಯನ್ನು ಸೋಲಿಸಲು ಮೈತ್ರಿ ಅನುಕೂಲಕರವಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆಮೈಸೂರು ಪತ್ರಕರ್ತರ ಭವನದಲ್ಲಿ  ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಐದು ವರ್ಷದಲ್ಲಿ ಏನು ಮಾಡಿದ್ದಾರೆ. ಮುಂದಿನ ಐದು ವರ್ಷಗಳಿಗೆ ಅವರ ಮುನ್ನೋಟ ಏನು.? ಯಾವುದರ ಬಗ್ಗೆಯೂ ಸಹ ಮಾತಾಡ್ತಿಲ್ಲ. ಅವರ ಭಾಷಣಗಳನ್ನು ನೋಡಿ  ನಾನು ಮೋದಿ‌ ಪ್ರಣಾಳಿಕೆಯನ್ನು ಓಲ್ಡ್ ವೈನ್ ಇನ್ ನ್ಯೂ ಬಾಟೆಲ್ ಅಂತ ಹೇಳುತ್ತೇನೆ ಎಂದರು.

ಕರ್ನಾಟಕದಲ್ಲಿ 18, 23ರಂದು ಎರಡು ಹಂತದಲ್ಲಿ ಮತದಾನ ನಡೆಯುತ್ತಿದೆ. ಮೊದಲ ಬಾರಿಗೆ ಕರ್ನಾಟಕದಲ್ಲಿ‌ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ. ಕಾಂಗ್ರೆಸ್ 21 ಜೆಡಿಎಸ್ 7 ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಹಾಕಿದ್ದಾರೆ. ಮೈಸೂರಿನಲ್ಲಿ ಸಿ.ಹೆಚ್ ವಿಜಯ್ ಶಂಕರ್ ಸ್ಫರ್ಧೆ ಮಾಡಿದ್ದಾರೆ ಎಂದರು. ಕೆಲವರು ಹೇಳುತ್ತಾರೆ ಸಿದ್ದರಾಮಯ್ಯ ಹಠಕ್ಕೆ ಬಿದ್ದು ಮೈಸೂರು ಲೋಕಸಭಾ ಕ್ಷೇತ್ರ ತೆಗೆದುಕೊಂಡಿದ್ದಾರೆ ಅಂತ. ಜೆಡಿಎಸ್​ನವ್ರು ಮೈಸೂರು ಅಥವಾ ತುಮಕೂರು ಕೇಳಿದ್ರು. ಇದುವರೆಗೂ ಮೈಸೂರಿನಲ್ಲಿ 13 ಬಾರಿ ಕಾಂಗ್ರೆಸ್ ಗೆದ್ದಿದೆ.  ಮೂರು ಬಾರಿ ಬಿಜೆಪಿಯವರು ಗೆದ್ದಿದ್ದಾರೆ. ಹಾಗಾಗಿ ನಾವು ಕಾಂಗ್ರೆಸ್​ಗೆ ಈ ಕ್ಷೇತ್ರ ತಗೊಳ್ಳೋದು ಸೂಕ್ತ ಅನಿಸ್ತು. ದೇವೇಗೌಡರು ತುಮಕೂರಿನಲ್ಲಿ ನಿಲ್ಲುತ್ತೇನೆ ಅಂದ್ರು. ಅದಕ್ಕೆ ಹಾಲಿ ಎಂಪಿ ಇದ್ರು ಬಿಟ್ಟುಕೊಟ್ವಿ. ಮೈತ್ರಿಯಿಂದ ಈಗಾಗಲೇ ಉತ್ತಮ ರಿಸಲ್ಟ್ ಬಂದಿದೆ ಎಂದು ಸಿದ್ದರಾಮಯ್ಯ ಹೇಳಿದ್ರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv