ಉದ್ದವಾಗಿ ನಾಮ ಇಡೋರು ರಾಕ್ಷಸರಂತೆ ಕಾಣುತ್ತಾರೆ: ಮಾಜಿ ಸಿಎಂ ಸಿದ್ದರಾಮಯ್ಯ

ಚಿಕ್ಕಮಗಳೂರು: ನಗರದಲ್ಲಿ ಮಾತನಾಡಿದ ಅವರು, ಕೇರಳದಲ್ಲಿ ರಾಹುಲ್ ಗಾಂಧಿ ಕುಂಕಮ ಇಟ್ಟುಕೊಂಡು ಪ್ರಚಾರ ಮಾಡುತ್ತಾರೆ. ಕುಂಕುಮ ಇಟ್ಕೊಂಡು ಒಂಥರಾ ರಾಹುಲ್ ಹರಕೆ ಕುರಿ ಥರ ಕಾಣ್ತಾ ಇದ್ರು ಎಂಬ ಹೇಳಿಕೆ ಬಗ್ಗೆ ಮಾತನಾಡಿ, ಉದ್ದವಾಗಿ ನಾಮ ಇಡಬೇಡ, ಉದ್ದನಾಮ ಇಟ್ಟುಕೊಂಡವರನ್ನು ಕಂಡ್ರೆ ನಮಗೆ ಭಯ ಆಗುತ್ತೆ, ಆ ರೀತಿ ನಾಮ ಇಡುವವರು ನಮಗೆ ರಾಕ್ಷಸರಂತೆ ಕಾಣುತ್ತಾರೆ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ರು.

ಅಲ್ಲದೇ ಜಾತಿ, ಧರ್ಮದ ಕಾರಣಕ್ಕೆ ಬಿಜೆಪಿಗೆ ಮತ ಹಾಕದೇ ಇದ್ರೆ ಅದು ಉಂಡ ಮನೆಗೆ ದ್ರೋಹ ಮಾಡೋದು ಅಥವಾ ಹಳ್ಳಿ ಕಡೆ ಹೇಳ್ತಾರಲ್ಲಾ ತಾಯಿ ಗಂಡ್ರು ಆ ಲೆಕ್ಕ ಎಂಬ  ಶಾಸಕ ಸಿ.ಟಿ ರವಿ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದು,  ತಾಯಿ ಗಂಡ ಕೆಲಸ ಅಂದ್ರೆ ಏನು? ಇದು ಸಿ.ಟಿ ರವಿಯ ಸಂಸ್ಕೃತಿಯನ್ನ ತೋರಿಸುತ್ತದೆ. ಅವನು ಏನಾದ್ರು ಹಾಗೇ ಆಗಿರಬೇಕು, ನನಗೆ ಗೊತ್ತಿಲ್ಲ ಅಂತಾ ಗುಡುಗಿದ್ದಾರೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv