ನರೇಂದ್ರ ಮೋದಿ ಮತ್ತೆ ಪ್ರಧಾನಿಯಾದ್ರೆ ಮೈತ್ರಿ ಸರ್ಕಾರದ ಕಥೆ ಖತಂ: ಸಿದ್ದರಾಮಯ್ಯ

ಮೈಸೂರು: ನರೇಂದ್ರ ಮೋದಿ ಮತ್ತೆ ಪ್ರಧಾನಿಯಾದ್ರೆ ಮೈತ್ರಿ ಸರ್ಕಾರದ ಕಥೆ ಖತಂ ಆಗುತ್ತೆ. ನಮಗೆಲ್ಲಾ ಕಷ್ಟ ತಪ್ಪಿದಲ್ಲ. ಮೈತ್ರಿ ಅಭ್ಯರ್ಥಿಗಳು ಸೋತ್ರೆ ಮೈತ್ರಿ ಸರ್ಕಾರ ಪತನ ಗ್ಯಾರೆಂಟಿ  ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ಅಧಿಕಾರ ಇಲ್ಲದೆಯೇ ನಮ್ಮ ಶಾಸಕರನ್ನ  20 -30 ಕೋಟಿ ರೂಪಾಯಿ ಕೊಟ್ಟು ಖರೀದಿ ಮಾಡಲು ಪ್ರಯತ್ನ ಮಾಡ್ತಾ ಇದ್ದಾರೆ. ಇನ್ನು ಅಧಿಕಾರಕ್ಕೆ ಬಂದ್ರೆ ಬಿಡ್ತಾರಾ… ಈಗಾಗಲೇ ನಮ್ಮ ಶಾಸಕರನ್ನ ಉಳಿಸಿಕೊಳ್ಳೋದು ತುಂಬಾ ಕಷ್ಟ ಆಗಿದೆ. ಮೋದಿ ಮತ್ತೆ ಪ್ರಧಾನಿ ಆದರೆ ನಮ್ಮ ಶಾಸಕರ ಖರೀದಿ ಆಗುತ್ತೆ. ನಮ್ಮ ಶಾಸಕರನ್ನ ಕೊಂಡುಕೊಳ್ಳೋಕೆ ನೋಡ್ತಿದ್ದಾರೆ.. ಅವರು ಬಂದುಬಿಟ್ರೆ  ನಮ್ಮ ಸರ್ಕಾರ ಅಸ್ತಿತ್ವದಲ್ಲಿ ಇರೋಕೆ ಬಿಡಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv