ನಿನ್ನೆ ಇನ್ನು ಎಲೆಕ್ಷನ್‌ಗೆ ನಿಲ್ಲಲ್ಲ ಅಂದ್ರು, ಇಂದು ಮತ್ತೆ ಸ್ಪರ್ಧಿಸೋ ಬಗ್ಗೆ ಸುಳಿವು ನೀಡಿದ್ರು..!

ಮೈಸೂರು:  ನಿನ್ನೆ ತಾನೆ ಜಿಲ್ಲೆಯ ಇಲವಾಲದಲ್ಲಿ ಮಾತನಾಡುತ್ತಾ ‘ಚುನಾವಣೆಯ ಮೇಲೆ ನನಗೆ ಆಸಕ್ತಿ ಕಡಿಮೆ ಆಗಿದೆ. ನಾನು ಇನ್ನು ಮುಂದೆ ಎಲೆಕ್ಷನ್‌ಗೆ ನಿಲ್ಲಲ್ಲ’ ಎಂದು ಹೇಳಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ಇಂದು ಯೂಟರ್ನ್ ಹೊಡೆದಿದ್ದು ನಾನು ಕೇವಲ ಚಾಮುಂಡೇಶ್ವರಿಯಲ್ಲಿ ಮಾತ್ರ ಚುನಾವಣೆಯಲ್ಲಿ ನಿಲ್ಲಲ್ಲ ಅಂತಾ ಹೇಳಿದ್ದೆ. ಬೇರೆ ಕಡೆ ನಿಲ್ಲೋದಿಲ್ಲ ಅಂತಾ ಹೇಳಿದ್ದೀನಾ.? ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಇನ್ನೂ ಚುನಾವಣೆಗೆ ನಾಲ್ಕು ವರ್ಷ ಬಾಕಿ ಇದೆ, ಮುಂದೆ ನೋಡೋಣ ಬಿಡಿ. ನನಗೂ ಚಾಮುಂಡೇಶ್ವರಿ ಕ್ಷೇತ್ರದ ಋಣ ಮುಗಿದಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೆ ಚುನಾವಣೆಯಲ್ಲಿ ಸ್ಪರ್ಧೆ ಮಾಡೋ ಸುಳಿವು ನೀಡಿದ್ದಾರೆ.

ಇದನ್ನೂ ಓದಿ:ಚುನಾವಣೆ ಆಸಕ್ತಿ ಕಡಿಮೆ ಆಗಿದೆ, ನಾನು ಇನ್ನು ಮುಂದೆ ಎಲೆಕ್ಷನ್‌ಗೆ ನಿಲ್ಲಲ್ಲ-ಸಿದ್ದರಾಮಯ್ಯ

ಮೈಸೂರಿನಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರ  ಪರ್ಸೆಂಟೆಜ್ ಸರ್ಕಾರ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು ಒಬ್ಬ ಪ್ರಧಾನಿಯಾಗಿ ಇಂತಹ ಹೇಳಿಕೆಗಳನ್ನ ಕೊಡಬಾರದು.ಇದೊಂದು ಬೆಸ್ಲೆಸ್ ಆರೋಪ. ಮೋದಿ ಸರ್ಕಾರ 100 % ಭ್ರಷ್ಟ ಸರ್ಕಾರ ಅಂತ ಆರೋಪ ಮಾಡ್ತೇನೆ. ಅದನ್ನ ನೀವು ಹಾಕ್ತೀರಾ.?. ಒಬ್ಬ ಪ್ರಧಾನಿ ಈ‌ ಮಟ್ಟಕ್ಕೆ ಇಳಿದು ಮಾತನಾಡಬಾರು. ಅವರ ಬಳಿ ಇಂಟೆಲಿಜೆನ್ಸ್ ಸೇರಿದಂತೆ ಹಲವು ಇಲಾಖೆಗಳಿದೆ. ಇಂತಹ ಆರೋಪ ಮಾಡುವ ಮುನ್ನ ಯೋಚನೆ ಮಾಡಬೇಕು. ಕಳೆದ ಐದು ವರ್ಷದಲ್ಲಿ ಎಮೋಷನಲ್ ಇಷ್ಯೂ ಬಿಟ್ಟು ಬೇರೆ ಏನು‌‌ ಮಾತನಾಡಿಲ್ಲ. ರಾಹುಲ್ ಗಾಂಧಿ ವಯನಾಡಲ್ಲಿ ನಿಲ್ಲೋದ್ದನ್ನ ಕಮೆಂಟ್ ಮಾಡ್ತಾರೆ. ಅಲ್ಲಿ ಮೈನರಿಟಿ ಇರುವುದರಿಂದ ಅಲ್ಲಿ ನಿಲ್ಲುತ್ತಿದ್ದಾರೆ ಎಂದು ಕಮೆಂಟ್ ಮಾಡ್ತಾರೆ. ಇದು ಕಮ್ಯುನಲ್ ವೈಲೆನ್ಸ್ ಆಗಲ್ವಾ. ಇಂತಹ ಹೇಳಿಕೆಯನ್ನ ಪ್ರಧಾನಿ ಕೊಡಬಹುದಾ.? ಎಂದು ಕಿಡಿಕಾರಿದ್ರು.

ಇದೇ ವೇಳೆ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಸೋತ್ರೆ, ಸರ್ಕಾರ ಉಳಿಯುತ್ತಾ ಅಂತಾ ತಮ್ಮ  ಹೇಳಿಕೆ ಬಗ್ಗೆ ಸಮಜಾಯಿಸಿಕೊಂಡ ಅವರು, ನಾನು ಹೇಳಿದ್ದು ಮೈತ್ರಿ ಪಕ್ಷ ಸೊತ್ರೆ, ಸರ್ಕಾರವನ್ನು ಬಿಜೆಪಿ ಅಸ್ಥಿರಗೊಳಿಸಬಹುದು ಅಂತಾ. ಅದನ್ನು ನೀವು ಸರಿಯಾಗಿ ಅರ್ಥೈಯಿಸಿಕೊಂಡಿಲ್ಲ. ಬಿಜೆಪಿ ಸದಾ ಮೈತ್ರಿ ಸರ್ಕಾರ ಅಸ್ಥಿರಗೊಳಿಸೋ ಪ್ರಯತ್ನ ಮಾಡುತ್ತಿದೆ. ಯಡಿಯೂರಪ್ಪ ಮೊದಲಿಂದಲೂ ಹೇಳಿಕೊಂಡು ಬರುತ್ತಿದ್ದಾನೆ. ಸರ್ಕಾರ ಬಿಳಿಸೊಕೆ ಆಗಿದ್ಯಾ.?. ಯಡಿಯೂರಪ್ಪ ಒಬ್ಬ ಲಿಡ್ರೇನ್ರಿ.?. ಬಿಜೆಪಿ ಒಂದು ಪಾರ್ಟಿನಾ, ಒಂದು ತತ್ವ ಸಿದ್ಧಾಂತ ಇಲ್ಲ, ಅವ್ರಿಗೆ ನೈತಿಕತೆ ಇದ್ಯಾ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್​ ಯಡಿಯೂರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು.

ಇದನ್ನೂ ಓದಿ:  ನನ್ನ ರಾಜಕೀಯ ಜೀವನದಲ್ಲಿ ಒಂದೇ ಒಂದು ಸುಳ್ಳು ಹೇಳಿಲ್ಲ -ಸಿದ್ದರಾಮಯ್ಯ, ಮಾಜಿ ಸಿಎಂ


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv