ನನ್ನ ರಾಜಕೀಯ ಜೀವನದಲ್ಲಿ ಒಂದೇ ಒಂದು ಸುಳ್ಳು ಹೇಳಿಲ್ಲ -ಸಿದ್ದರಾಮಯ್ಯ, ಮಾಜಿ ಸಿಎಂ

ಮೈಸೂರು: ನಾನು ನನ್ನ ರಾಜಕೀಯ ಜೀವನದಲ್ಲಿ ಒಂದೇ ಒಂದು ಸುಳ್ಳು ಹೇಳಿಲ್ಲ. ಹಾಗೇನಾದ್ರೂ ನಾನು ಒಂದೇ ಒಂದು ಸುಳ್ಳು ಹೇಳಿದ್ರೆ ರಾಜಕೀಯದಲ್ಲಿ ಇರೋಲ್ಲ ಅಂತಾ ಮಾಜಿ ಸಿಎಂ ಸಿದ್ದರಾಮಯ್ಯ ಘೋಷಿಸಿಕೊಂಡಿದ್ದಾರೆ. ಮೋದಿ ಸಂಸತ್ ನಲ್ಲಿ ಮಾತಾಡೋಲ್ಲ , ಸುದ್ದಿಗೋಷ್ಠಿ ಮಾಡೋಲ್ಲ. ಮೋದಿ ಪುಕ್ಕಲ ಇರಬೇಕು. ಈ ಮೀಡಿಯಾದವರು ಅವರನ್ನು ಕೇಳೋಲ್ಲ. ನಾವು ಸಿಕ್ಕಿದಾಗ ನಮ್ಮನ್ನು ಹಿಡ್ಕೊಂಡ್ ಕೇಳ್ತಾರೆ , ಯಾವಾಗ್ಲೂ ತೊಂದ್ರೆ ಕೊಡ್ತಾನೆ ಇರ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮಾಧ್ಯಮದವರ ವಿರುದ್ಧವೂ ಹರಿಹಾಯ್ದಿದ್ದಾರೆ.

ಇದೇ ವೇಳೆ  ಭಾಷಣ  ಮಾಡುತ್ತಿದ್ದಾಗ ಮಸೀದಿಯಲ್ಲಿ ಆಜಾನ್ ಕೇಳಿ ಬಂದ ಹಿನ್ನೆಲೆ ಒಂದೆರೆಡು ನಿಮಿಷ ಭಾಷಣ ನಿಲ್ಲಿಸಿ, ಮತ್ತೆ ಭಾಷಣ ಮುಂದುವರಿಸಿದ್ರು. ಬಳಿಕ ಮಾತನಾಡಿದ ಅವರು, ಸಂವಿಧಾನ ಬದಲು ಮಾಡ್ತೀನಿ ಅಂತಾರೆ ಬಿಜೆಪಿಯವರು. ಅದು ಕಾಮನ್ ಮ್ಯಾನ್ ಅಲ್ಲ, ಎಂಪಿ ಅಷ್ಟೇ ಅಲ್ಲ ಸಚಿವ ಅನಂತಕುಮಾರ್ ಹೆಗಡೆ, ಅವನು ಯಾವನು ಎಂಥೆದೋ ಸೂರ್ಯ ಅಂತ ಅವನು ಅಂಬೇಡ್ಕರ್ ಪುತ್ಥಳಿಗಳನ್ನು ಧ್ವಂಸ ಮಾಡ್ಬೇಕಂತೆ. ಸಂವಿಧಾನ ಸುಟ್ಟು ಹಾಕಿ ಅಂತಾರೆ. ದೆಹಲಿಯಲ್ಲಿ ಜಂತರ್ ಮಂತರ್ ಅಂತ ಏರಿಯಾ ಇದೆ ಅಲ್ಲಿ ಆರ್​ಎಸ್​ಎಸ್​ನವರು ಸಂವಿಧಾನ ಸುಟ್ಟು ಹಾಕಿದ್ರು. ಇಂತವರು ಹಿಟ್ಲರ್ ಮನಸ್ಸಿನವರು, ಮನುವಾದಿಗಳು ಇವರು ಬಂದ್ರೆ ರೈತರು,‌ಬಡವರು ಉದ್ಧಾರ ಆಗೋಲ್ಲ. ಆರ್​ಎಸ್​ಎಸ್ ಮೋಹನ್ ಭಾಗವತ್ ಹೇಳ್ತಾನೆ ಮಿಸಲಾತಿ ರದ್ಧು ಮಾಡ್ಬೇಕು ಅಂತ. ಮೀಸಲಾತಿ ಇಲ್ಲ ಅಂದ್ರೆ ಎಸ್ ಸಿ, ಎಸ್ಟಿ, ಮಹಿಳೆಯರು ಮೇಲೆ ಬರೋಕ್ಕೆ ಆಗ್ತಿತ್ತಾ ಎಂದು ಪ್ರಶ್ನಿಸಿದ್ರು.


firstNewsKannada  Instagram: firstnews.tv  Facebook: firstnews.tv  Twitter: firstnews.tv