‘ಮಂಡ್ಯದಲ್ಲಿ ಸುಮಲತಾ ನಮ್ಮ ವಿರೋಧಿ ಅಲ್ಲ’ ಸಿದ್ದರಾಮಯ್ಯ ಅಚ್ಚರಿಯ ಹೇಳಿಕೆ

ಮೈಸೂರು: ರಾಜ್ಯದಲ್ಲಿ ಮೈತ್ರಿ ಸರ್ಕಾರ ಇದೆ,  ನಾವೇ 82, ಜೆಡಿಎಸ್ 37 ಸ್ಥಾನ ಗೆದ್ದಿದ್ರು, ಕೋಮುವಾದಿ ಬಿಜೆಪಿ ಅಧಿಕಾರಕ್ಕೆ ಬರಬಾರದು ಅಂತ ಮೈತ್ರಿ ಮಾಡ್ಕೊಂಡ್ವಿ. ಬಿಜೆಪಿಯವರು ಜಾತಿ, ಧರ್ಮದ ಆಧಾರದ ಮೇಲೆ ಅಧಿಕಾರಕ್ಕೆ ಬಂದಿದ್ದಾರೆ. ಅವರು  ಬಡವರ ಬಗ್ಗೆ,‌ ರೈತರ ಬಗ್ಗೆ, ಮಹಿಳೆಯರ ಬಗ್ಗೆ ಮಾತಾನಾಡೋಲ್ಲ . ನಮಗೆ ಬಿಜೆಪಿ, ಪ್ರತಾಪ್ ಸಿಂಹ ವಿರೋಧಿಗಳು. ಮಂಡ್ಯದಲ್ಲಿ ಸುಮಲತಾ ನಮ್ಮ ವಿರೋಧಿ ಅಲ್ಲ ಅಂತ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಇನ್ನೂ ಮುಂದುವರೆದು ಇದೇ ಕಾರಣಕ್ಕೆ ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿಗೆ, ಹಾಸನದಲ್ಲಿ ಪ್ರಜ್ವಲ್ ರೇವಣ್ಣಗೆ, ಮೈಸೂರಿನಲ್ಲಿ ಸಿ ಹೆಚ್ ವಿಜಯ್ ಶಂಕರ್​ಗೆ ಮತ ಹಾಕಿ ಎಂದು ಮನವಿ ಮಾಡಿದ್ರು.

1992 ಡಿಸೆಂಬರ್ 6 ಬಾಬಾ ಸಾಹೇಬ್ ಅಂಬೇಡ್ಕರ್ ಪರಿನಿರ್ವಾಣ ದಿನದಂದು ಬಾಬ್ರಿ ಮಸೀದಿ ಹೊಡೆದಾಕಿದ್ರು. ಪ್ರತಿ ಚುನಾವಣೆಯಲ್ಲಿ ರಾಮಮಂದಿರ ಕಟ್ತೀವಿ ಅಂತ ಸುಳ್ಳು ಹೇಳ್ತಾರೆ. ರಾಮಮಂದಿರ ಕಟ್ಟಲು ನಮ್ಮದೇನು ಆಕ್ಷೇಪ ಇಲ್ಲ. 20 ವರ್ಚಗಳ ಹಿಂದೆ ರಾಮಮಂದಿರ ಕಟ್ಟಲು ಇಟ್ಟಿಗೆ ತೆಗೆದುಕೊಂಡು ಹೋದ್ರು ಇದಕ್ಕೆಲ್ಲ‌ ಲೆಕ್ಕ ಕೊಡಬೇಕು. ನರೇಂದ್ರ ಮೋದಿ ಸುಳ್ಳು ಹೇಳ್ತಾನೆ, ಇಲ್ಲೋಬ್ಬ ಪ್ರತಾಪ್ ಸಿಂಹ ಸುಳ್ಳು ಹೇಳಿಕೊಂಡು ತಿರ್ಗಾಡ್ತಾನೆ ಅಂತಾ ಮಾಜಿ ಸಿಎಂ ಸಿದ್ದರಾಮಯ್ಯ, ಪ್ರಧಾನಿ ಮೋದಿ ಹಾಗೂ ಸಂಸದ ಪ್ರತಾಪ್​ ಸಿಂಹ ವಿರುದ್ಧ ಹರಿಹಾಯ್ದಿದ್ದಾರೆ.

ಕಡಕೊಳ ಕಾಂಗ್ರೆಸ್ , ಜೆಡಿಎಸ್ ಮೈತ್ರಿ ಸಭೆಯಲ್ಲಿ ಮಾತನಾಡಿದ ಅವರು, ನಾನು ಜಿ.ಟಿ ದೇವೇಗೌಡ ರಾಜಕೀಯವಾಗಿ ಒಂದಾಗಿದ್ವಿ. ಅದಾದ್ಮೇಲೆ 2006 ರಿಂದ ರಾಜಕೀಯವಾಗಿ ಬೇರೆ ಬೇರೆ ಆಗಿದ್ವಿ ಅಲ್ವಾ ಎಂದು ಸಚಿವ ಜಿಟಿಡಿಯನ್ನು ಕೇಳಿದ್ರು. ನಾವಿಬ್ಬರು ಜತೆಗೆ ಇದ್ವಿ ಆದ್ರೂ ಅವನು ನಾನು ಕಳೆದ ಬಾರಿ ಫೈಟ್ ಮಾಡಿದ್ವಿ. ಜೊತೆಗಿದ್ದು ನನ್ನನೇ ಸೋಲಿಸಿಲ್ವಾ ಜಿ,ಟಿ ದೇವೇಗೌಡ ಅಂತಾ ಸಿದ್ದರಾಮಯ್ಯ ಕೇಳಿದ್ದಕ್ಕೆ, ಜಿಟಿ ದೇವೇಗೌಡ ನಕ್ಕು ಸುಮ್ಮನಾದ್ರು.


firstNewsKannada  Instagram: firstnews.tv  Facebook: firstnews.tv  Twitter: firstnews.tv