ನಮ್ಮ‌ ಟಾರ್ಗೆಟ್ ಮೋದಿಯಲ್ಲ, ಕೋಮುವಾದಿ ಬಿಜೆಪಿ: ಸಿದ್ದರಾಮಯ್ಯ

ಮೈಸೂರು: ನಮ್ಮ‌ ಟಾರ್ಗೆಟ್ ಮೋದಿಯಲ್ಲ, ಕೋಮುವಾದಿ ಬಿಜೆಪಿ. ಸುಳ್ಳು ಹೇಳೋ ಮೋದಿ‌ ಬಗ್ಗೆ ನನ್ನ ಬಳಿ ಏನು ಕೇಳಬೇಡಿ. ಅವರಿಗೆ ನನ್ನನ್ನ, ದೇವೇಗೌಡರನ್ನ, ಕುಮಾರಸ್ವಾಮಿಯನ್ನ ಟೀಕೆ ಮಾಡೋದು ಬಿಟ್ಟು ಬೇರೆ ಏನು ಗೊತ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ

ಮೈಸೂರಲ್ಲಿ‌ ಮಾತನಾಡಿದ ಅವರು, ನಾನು ದೇವೇಗೌಡರು ಜೊತೆಯಾದ ಮೇಲೆ ಪರಿಸ್ಥಿತಿ ಉತ್ತಮವಾಗಿದೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಒಳ್ಳೆಯ ಫಲಿತಾಂಶ ಬರುತ್ತದೆ. ಇವತ್ತು ನಾನು, ಸಚಿವ ಜಿಟಿ ದೇವೇಗೌಡ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರಚಾರ ಮಾಡ್ತೀವಿ. ಚುನಾವಣೆವರೆಗೂ ನಮ್ಮ ಕಾರ್ಯಕರ್ತರು ಪ್ರಚಾರ ಮಾಡಲಿದ್ದಾರೆ ಎಂದರು.


firstNewsKannada  Instagram: firstnews.tv  Facebook: firstnews.tv  Twitter: firstnews.tv