ಐಟಿ ರೈಡ್​ಗೆ ನನ್ನ ವಿರೋಧ ಇಲ್ಲ, ಆದ್ರೆ ಚುನಾವಣಾ ಸಂಧರ್ಭದಲ್ಲಿ ಮಾಡೋದು ಸರಿಯಲ್ಲ: ಸಿದ್ದರಾಮಯ್ಯ

ಮೈಸೂರು: ಚುನಾವಣೆ ಸಂದರ್ಭದಲ್ಲಿ ಐಟಿ ರೈಡ್ ನಡೆಯುತ್ತಿರುವುದಕ್ಕೆ ನನ್ನ ವಿರೋಧ ಇಲ್ಲ, ಆದಾಯ ತೆರಿಗೆ ವಂಚಿತರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಅದು ಸರಿ. ಆದ್ರೆ ಬೇಕಂತಲೇ ದಾಳಿ‌ಮಾಡೋದು,‌ ಚುನಾವಣಾ ಸಂಧರ್ಭದಲ್ಲಿ ಮಾಡೋದು ಸರಿಯಲ್ಲ. ನಾವು ದೂರು ಕೊಟ್ಟಿದ್ವಿ ನಮ್ಮ ಎಂಎಲ್ಎಗಳಿಗೆ ₹25 ಕೋಟಿ ಆಫರ್ ಮಾಡಿದ್ವಿ ಅಂತ. ಯಾಕೆ ಐಟಿ ಅಧಿಕಾರಿಗಳು ದಾಳಿಯನ್ನು ಮಾಡಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಮೈಸೂರಿನ ಪತ್ರಕರ್ತರ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪನ ಮೇಲೆ ದಾಳಿ ಮಾಡ್ಲಿ,‌ ಶೋಭಾ ಕರಂದ್ಲಾಜೆ, ಆಶೋಕ್, ಅರವಿಂದ್ ಲಿಂಬಾವಳಿ, ಆಶ್ವಥ್ ನಾರಾಯಣ ಮನೆಗಳ ಮೇಲೆ‌ ಮಾಡ್ಲಿ. ಬಿಜೆಪಿಯವರು ಏನ್ ಸತ್ಯಾ ಹರಿಶ್ಚಂದ್ರರಾ ? ಎಂದು ಗುಡುಗಿದ್ರು. ಇದೇ ವೇಳೆ ಸಿಎಂ ಕುಮಾರಸ್ವಾಮಿ ಪದೇ ಪದೇ ಆರೋಗ್ಯ ಸರಿ ಇಲ್ಲ ಅನ್ನೊ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಆ ವಿಚಾರವನ್ನು ಸಮನ್ವಯ ಸಮಿತಿ ವಿಚಾರದಲ್ಲಿ ಕೇಳುತ್ತೇನೆ ಮಾಧ್ಯಮಗಳಲ್ಲಿ ಕೆಲವೊಂದು ಬಾರಿ ಕಾಂಟೆಸ್ಟ್ ಬಿಟ್ಟು ಸುದ್ದಿಯಾಗುತ್ತವೆ. ಎಲ್ಲವನ್ನೂ ನಂಬಲು ಸಾಧ್ಯವಿಲ್ಲ, ಈ ಬಗ್ಗೆ ವಿಚಾರ ಮಾಡ್ತೀನಿ ಎಂದು ಹೇಳಿದ್ರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv