‘ಮೋದಿ ಯುದ್ದ ಮಾಡೋಕೆ ವಿಮಾನದಲ್ಲಿ ಗನ್ ಹಿಡ್ಕೊಂಡ್ ಹೋಗಿದ್ರಾ’

ಮೈಸೂರು: ಪುಲ್ವಾಮ ದಾಳಿ ವೇಳೆ  2.500 ಸೈನಿಕರು ಸೂಕ್ಷ್ಮ ಪ್ರದೇಶದಲ್ಲಿ ಹೋಗ್ತಿದ್ರು. ಉಗ್ರರು ದಾಳಿ ಮಾಡುವ ಬಗ್ಗೆ ಇಂಟಲಿಜೆನ್ಸ್, ಐಬಿಗೆ ಮಾಹಿತಿ ಇರಲಿಲ್ವ, ಆಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿದ್ರಿ ಅದು ಸೈನಿಕರಿಗೆ ಸೇರಿದ್ದು. ಮೋದಿ ಏನ್ ವಿಮಾನದಲ್ಲಿ ಯುದ್ದ ಮಾಡಲು ಗನ್ ಹಿಡ್ಕೊಂಡ್ ಹೋಗಿದ್ರಾ ಏನ್ ದೇಶ ಪ್ರೇಮ ನನಗೆ ಇದೆ ಅಂತ ಯುವಕರಲ್ಲಿ ಹುರಿದುಂಬಿಸುತ್ತಾರೆ.  ಮೊದಲ ಭಾರತ- ಪಾಕ್ ಯುದ್ಧ ಆದಾಗ ಮೋದಿ‌ ಹುಟ್ಟಿರಲಿಲ್ಲ ನಾನು ಸ್ವಾತಂತ್ರ್ಯ ಬರೋದಕ್ಕೂ ಮೊದಲು ಮೂರು ದಿನ ಮುಂಚೆ ಹುಟ್ಟಿದ್ದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಪತ್ರಕರ್ತರ ಸಂವಾದದಲ್ಲಿ  ಮಾತನಾಡಿದ ಅವರು, ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ ಭಾರತ- ಪಾಕ್ ಯುದ್ದಗಳಾಗಿವೆ. ನಾವು ಸೈನಿಕರಿಗೆ ಗೌರವ ಸಲ್ಲಿಸುತ್ತೇವೆ. ಅವನ್ಯಾವನೋ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿ ಅಂತೆ. ಅವಾ ಹೇಳ್ತಾನೆ‌ ಮೋದಿ ಸೈನ್ಯ ಅಂತ ಎಂತಃ ಸೈಕೋ‌ಪ್ಯಾತ್ ನೋಡಿ. ಅಮಿತ್ ಶಾ ಹೇಳ್ತಾನೆ ಹಿಂದೂಗಳನ್ನು ಬಿಟ್ಟು ಉಳಿದವರನ್ನ ಹೊರ ಹಾಕ್ತಿವಿ ಅಂತ. ಮಹಿಳಾ ಮೀಸಲಾತಿ ಮಸೂಧೆ ಏಕೆ ಬಿಜೆಪಿ ಜಾರಿಗೆ ತಂದಿಲ್ಲ. 292 ಜನ ಬಿಜೆಪಿ ಸಂಸದರು ಇದ್ದಿರಾ. ಮಹಿಳೆಯರಿಗೆ ಸಮಾನತೆ ಬೇಡ್ವಾ ?, ಸಾಮಜಿಕ ನ್ಯಾಯ ಬೇಡ್ವಾ? ಕರ್ನಾಟಕದಲ್ಲಿ 18 ಲೋಕಸಭಾ ಸ್ಥಾನಗಳಲ್ಲಿ ಒಬ್ಬರಿಗೆ ಹಿಂದುಳಿದವರಿಗೆ ಒಂದು ಟಿಕೇಟ್ ಕೊಟ್ಟಿಲ್ಲ. ಮತ್ತೆ ಎಲ್ಲಪ್ಪ ಸಬ್ ಕಾ‌ ಸಾಥ್ ಸಬ್ ಕಾ ವಿಕಾಸ್  ಎಂದು ಪ್ರಶ್ನಿಸಿದ್ರು.

ಇದೇ ವೇಳೆ ಮೊದಲ ಮತದಾನ ಮಾಡುವವರು ಬಿಜೆಪಿಗೆ ಮತ ಕೊಟ್ಟು ಆಮೂಲಕ ತಮ್ಮ ಮತ ಸೈನಿಕರಿಗೆ ಅರ್ಪಿಸಿ  ಎಂಬ ಮೋಡಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಸೈನಿಕರು ಈಗ ಬಂದವರಾ ಮೊದಲಿನಿಂದಲೂ ಇದ್ದಾರೆ. ಜೈ ಜವಾನ್ ಜೈ ಕಿಸಾನ್ ಅಂತ ಹೇಳಿದ್ದು ಯಾರು.?, ದೇಶ ಭಕ್ತಿ ಹೆಸರಲ್ಲಿ ಅವರು ಮಾಡಿದ್ದು‌ ಮಹಾತ್ಮ ಗಾಂಧಿನ‌ ಕೊಂದಿದ್ದು ಅಷ್ಟೇ ಎಂದು ಕಿಡಿಕಾರಿದ್ರು.

ಯಡಿಯೂರಪ್ಪ ಹೇಳ್ತಾರೆ ಮೈತ್ರಿ ಸರ್ಕಾರ ಬೀಳಿಸ್ತಿನಿ ಅಂತ. ತಿಪ್ಪರಲಾಗ ಹೊಡೆದ್ರು ಸರ್ಕಾರನಾ ಬಿಳಿಸಲು ಸಾಧ್ಯವಿಲ್ಲ. ತಿಪ್ಪರಲಾಗ ಅಂದ್ರೆ ಏನ್ ಗೊತ್ತಾ ನಿಮ್ಗೆ
ಹಾಗೆ ಅವರು ಏನೇ ಮಾಡಿದ್ರು ಸರ್ಕಾರಕ್ಕೆ ತೊಂದ್ರೆ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದ್ರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv