‘ಮತ್ತೆ ಮೋದಿ ಗೆದ್ರೆ ಹಿಟ್ಲರ್ ಆಡಳಿತ ಬರುತ್ತೆ, ಹಾಗಾಗಿ ಅವರಿಗೆ ಮತ ನೀಡಬೇಡಿ’

ಚಿಕ್ಕಮಗಳೂರು: ಮೋದಿ, ಇಮ್ರಾನ್ ಖಾನ್ ನಡುವಿನ ಒಳ ಒಪ್ಪಂದ ಏನು? ಈ ಹಿಂದೆ ನವಾಜ್ ಶರೀಫ್ ಭೇಟಿ ಮಾಡಲು ಇದೇ ಮೋದಿ ಹೇಳದೇ ಕೇಳದೇ ಪಾಕಿಸ್ತಾನಕ್ಕೆ ಹೋಗಿ, ಅವರ ಜೊತೆ ಬಿರಿಯಾನಿ ತಿಂದು ಬಂದ್ರು. ನಾವು ಬಿಜೆಪಿಯವರಿಂದ ದೇಶ ಪ್ರೇಮ ಬಗ್ಗೆ ಪಾಠ ಕಲಿಯಬೇಕಿಲ್ಲ ಅಂತಾ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಕಡೂರಿನಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಜ್ವಲ್​ ರೇವಣ್ಣ ಪರ ಮತ ಪ್ರಚಾರದ ವೇಳೆ ಮಾತನಾಡಿದ ಅವರು, ಮೋದಿ ಪಾಕಿಸ್ತಾನದ ವಿರುದ್ಧ ಮಾತಾನಾಡಿ ಹಿರೋ ಆಗಿದ್ದಾರೆ. ಆದ್ರೆ, ಇಮ್ರಾನ್ ಖಾನ್ ಮೋದಿ ಬಗ್ಗೆ  ಮಾತಾನಾಡುತ್ತಾರೆ. ಮೋದಿ ಮತ್ತೊಮ್ಮೆ ಗೆದ್ರೆ, ಈ ಚುನಾವಣೆ ವ್ಯವಸ್ಥೆಯೇ ಇರೋದಿಲ್ಲ. ಬದಲಿಗೆ ಸರ್ವಾಧಿಕಾರಿ ಆಡಳಿತ ಆರಂಭವಾಗುತ್ತೆ. ಮೋದಿ ಗೆದ್ರೆ ಹಿಟ್ಲರ್ ಆಡಳಿತ ಜಾರಿಗೆ ಬರುತ್ತೆ. ಹಾಗಾಗಿ ಅವರಿಗೆ ಮತ ನೀಡಬೇಡಿ. ಯಾವುದೇ ಕಾರಣಕ್ಕೂ ಬಿಜೆಪಿ ಮತ ಹಾಕಬೇಡಿ ಅಂತಾ ಮನವಿ ಮಾಡಿದ್ರು.

ಎ.ಮಂಜು ಒಂಥಾರ ಕಳ್ಳೆತ್ತು..!
ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ಮಂಜುಗೆ ಒಂದೂ ವೋಟ್ ಹಾಕಬೇಡಿ. ಎ.ಮಂಜು ಒಂಥರಾ ಕಳ್ಳೆತ್ತು. ಪಕ್ಷ ದ್ರೋಹಿ ಕೆಲಸ ಮಾಡಿದ್ದಾರೆ. ಕಳೆದ ಬಾರಿ ಕಾಂಗ್ರೆಸ್​ನಿಂದ ಹೆಚ್ಚು ಮತ ಗಳಿಸಿದ್ರು. ಈ ಬಾರಿಯ ಚುನಾವಣೆಯಲ್ಲಿ ಅವ್ರಿಗೆ ಒಂದೂ ಮತವನ್ನು ನೀಡಬೇಡಿ. ಜೆಪಿಗೆ ಹೋಗುವ ಮುನ್ನಾ ನನ್ನ ಬಳಿ ಬಂದಿದ್ದ. ನಾನು ಯಾವುದೇ ಕಾರಣಕ್ಕೂ ಬಿಜೆಪಿಗೆ ಹೋಗಲ್ಲ ಎಂದಿದ್ದ. ನನ್ನನ್ನ ಸಚಿವನನ್ನಾಗಿ ಮಾಡಿದ್ದೀರಾ ನಾನು ಕಾಂಗ್ರೆಸ್​ ಬಿಡಲ್ಲಾ ಎಂದಿದ್ದ. ಈಗ ಪಕ್ಷ ದ್ರೋಹ ಕೆಲಸ ಮಾಡಿದ್ದಾನೆ ಅಂತಾ ಕಿಡಿಕಾರಿದ್ರು. ಇನ್ನು ಈ ಚುನಾವಣೆ ಮಹತ್ವ ಚುನಾವಣೆ. ಇಡೀ ಜಗತ್ತು ಈ ಲೋಕಸಭೆ ಚುನಾವಣೆಯನ್ನ ಗಮನಿಸುತ್ತಿದೆ. ಮೋದಿ ಮತ್ತೇ ಪ್ರಧಾನಿಯಾಗ್ತಾರಾ ಎಂದು ಜಗತ್ತು ನೋಡುತ್ತಿದೆ ಆದ್ರೆ ಮೋದಿಗೆ ಮತ ನೀಡಬೇಡಿ ಅಂತಾ ಮನವಿ ಮಾಡಿದ್ರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv