ವಾಜಪೇಯಿಗೆ ಯಾವ ಗತಿ ಬಂತೋ ಅದೇ ಗತಿ ಮೋದಿಗೆ ಬರುತ್ತೆ: ಸಿದ್ದರಾಮಯ್ಯ

ತುಮಕೂರು: ಸ್ವಾತಂತ್ರ್ಯ ಬಂದಾಗ ಮೋದಿ ಹುಟ್ಟಿರಲಿಲ್ಲಾ ನನಗಿಂತಲೂ ಮೋದಿ ಚಿಕ್ಕವನು. ನಿಮ್ಮ ಬಿಜೆಪಿಯಲ್ಲಿ ಯಾರಾದ್ರೂ ಸ್ವಾತಂತ್ರ್ಯದಲ್ಲಿ ಭಾಗವಹಿಸಿದ್ರಾ? ವಾಜಪೇಯಿಗೆ ಯಾವ ಗತಿ ಬಂತೋ ಅದೇ ಗತಿ ಮೋದಿಗೆ ಬರುತ್ತೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಮೈತ್ರಿ ಅಭ್ಯರ್ಥಿ ದೇವೇಗೌಡರು ಪರ ಪ್ರಚಾರ ಭಾಷಣ ಮಾಡಿದ ಸಿದ್ದರಾಮಯ್ಯ, ಬಿಜೆಪಿ ಪ್ರಣಾಳಿಕೆ ಜನಸಂಘ ಹುಟ್ಟಿದಾಗಿನಿಂದಲೂ ಹೇಳುತ್ತಿರುವ ಘೋಷಣೆ. ಅಂದಿನಿಂದ ಈಗಲೂ ಅದೇ ರಾಮಮಂದಿರ, ಅದೇ 370 ವಿಧಿ. ರಾಮಮಂದಿರ ನಿರ್ಮಾಣವನ್ನ ಚುನಾವಣಾ ವಿಷಯ ಮಾಡಿಕೊಂಡು ಜನರನ್ನ ಮರಳು ಮಾಡುತ್ತಿದ್ದಾರೆ. ಯಾರೂ ನರೇಂದ್ರ ಮೋದಿ ನಂಬಬೇಡಿ. ನರೇಂದ್ರ ಮೋದಿ ಗೆದ್ದರೆ ಸಂವಿಧಾನ ಉಳಿಯಲ್ಲಾ. ಯಾರೂ ನರೇಂದ್ರ ಮೋದಿಗೆ ಓಟು ಹಾಕಬೇಡಿ ಎಂದು ಸಿದ್ದರಾಮಯ್ಯ ಮತದಾರರಲ್ಲಿ ಮನವಿ ಮಾಡಿಕೊಂಡರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv