ಕೋಮುವಾದಿ ಪಕ್ಷವನ್ನ ಸೋಲಿಸಲು ಪ್ರಚಾರ ಮಾಡ್ತಿದ್ದೇವೆ: ಸಿದ್ದರಾಮಯ್ಯ

ಮೈಸೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನರು ಯಾವ ಪಕ್ಷಕ್ಕೂ ಬಹುಮತ ಕೊಟ್ಟಿಲ್ಲ. ರಾಹುಲ್ ಗಾಂಧಿ ಅವರು ಇನ್ನೂ ಫಲಿತಾಂಶ ಪೂರ್ಣ ಆಗಕ್ಕೂ ಮೊದಲೇ ಕರೆ ಮಾಡಿದ್ರು. ಬಿಜೆಪಿಯನ್ನು ಅಧಿಕಾರದಿಂದ ಹೊರಗಡೆ ಇಡಬೇಕು ಅಂತಾ ತಿಳಿಸಿದ್ರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ನಗರದಲ್ಲಿ ನಡೆದ ಜೆಡಿಎಸ್​-ಕಾಂಗ್ರೆಸ್​​​​​ ಜಂಟಿ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ, ದೇವೇಗೌಡರ ಜತೆ ಮಾತಾಡಿ ಕೋಮುವಾದಿ ಪಕ್ಷ ಅಧಿಕಾರಕ್ಕೆ ಬರಬಾರ್ದು ಅಂತಾ ಹೇಳಿದ್ರು. ಜೆಡಿಎಸ್ ಪಕ್ಷದವರೆ ಮುಖ್ಯಮಂತ್ರಿ ಆಗಲಿ ನಾವು ಬೆಂಬಲ ಕೊಡಬೇಕು ಎಂದಿದ್ದರು. ಅದ್ರಂತೆ ಕುಮಾರಸ್ವಾಮಿ ನೇತೃತ್ವದಲ್ಲಿ ಸರ್ಕಾರ ರಚನೆಯಾಗಿ ಹತ್ತು ತಿಂಗಳು‌ ಪೂರೈಸಿದೆ. ಕಳೆದ ವಿಧಾನಸಭಾ ಚುನಾವಣಾ ಫಲಿತಾಂಶ ಬಂದಾಗಲೇ ಮುಂದಿನ ಲೋಕಸಭಾ ಮೈತ್ರಿ ತೀರ್ಮಾನ ಆಗಿತ್ತು. ಮೋದಿ ಮತ್ತೆ ಪ್ರಧಾನಿಯಾಗಬಾರದು ಅಂತಾ ನಿರ್ಧಾರ ಮಾಡಿದ್ದೇವೆ ಎಂದರು.

ರಾಜ್ಯದಲ್ಲಿ ನಾವು 21 ಜೆಡಿಎಸ್ 7 ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದೇವೆ. ಬಿಜೆಪಿ 27 ಕಡೆ ಅಭ್ಯರ್ಥಿ ಹಾಕಿದ್ದಾರೆ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಗೆ ಬೆಂಬಲ‌ ಕೊಟ್ಟಿದ್ದಾರೆ. ನಾನು ಇವತ್ತು ಮಂಡ್ಯದಲ್ಲಿ ಹೇಳಿದೆ ಕೋಮುವಾದಿ ಬೆಂಬಲಿಸುವ ಯಾವುದೇ ಅಭ್ಯರ್ಥಿ ಗೆಲ್ಲಬಾರದು. ಅದಕ್ಕೆ ನಾವು ದೇವೇಗೌಡರು ಜತೆಯಾಗಿಯೇ ಪ್ರಚಾರ‌ ಮಾಡ್ತಿದ್ದೇವೆ. ಮಾಧ್ಯಮದವರು ಕೇಳಿದ್ರು ಏನ್ ಸಾರ್ ನೀವು ದೇವೇಗೌಡರು ಜತೆಯಾಗಿ ಹೋಗ್ತಿದ್ದಿರಾ ಅಂತಾ. ನಾನು ಹೇಳಿದೆ ಕೋಮುವಾದಿ ಪಕ್ಷವನ್ನು ಸೋಲಿಸಲು ಪ್ರಚಾರ ಮಾಡ್ತಿದ್ದೇವೆ. ಕರ್ನಾಟಕದಲ್ಲಿ ಮಾತ್ರ ಅಲ್ಲ ದೇಶದ ಎಲ್ಲೆಡೆ ಬಿಜೆಪಿಯ ವಿರುದ್ಧ ಮೈತ್ರಿಗಳು ಆಗಿವೆ. ಬಿಜೆಪಿಯ ವಿರುದ್ಧ ಹೋರಾಟ ಮಾಡ್ತಿದ್ದೇವೆ ಮತ್ತೆ ಅಧಿಕಾರಕ್ಕೆ ಬರಬಾರ್ದು ಅಂತಾ ಹೇಳಿದೆ ಎಂದರು.

ಮೈಸೂರಲ್ಲಿ ವಿಜಯ್ ಶಂಕರ್ ಮಂಡ್ಯದಲ್ಲಿ ನಿಖಿಲ್, ಚಾಮರಾಜನಗರ ಧ್ರುವನಾರಾಯಣ್ ಗೆಲ್ಲಬೇಕು. ಮೋದಿ ಮಹಾ ಸುಳ್ಳುಗಾರ. ಅವರ ನಂತರ ಪ್ರತಾಪ್ ಸಿಂಹ ದೊಡ್ಡ ಸುಳ್ಳುಗಾರ. ಅಭಿವೃದ್ಧಿ ಮಾಡಿದ್ದೇನೆ ಎಂದು ಪುಸ್ತಕ ಪ್ರಿಂಟ್ ಮಾಡಿ ಹಂಚುತ್ತಿದ್ದಾನೆ. ನಾವು ಮಾಡಿದ್ದು ನೀನೇನು ಅಭಿವೃದ್ಧಿ ಮಾಡಿಲ್ಲ. ಮೋದಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಭ್ರಷ್ಟಾಚಾರದ ಪಾಲುದಾರ ಮಿಸ್ಟರ್ ಮೋದಿ. ಮೈತ್ರಿ ಸರ್ಕಾರ ₹ 45 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದ್ದಾರೆ. ಮೋದಿಯವರೇ ನೀವೇನಾದ್ರು ಒಂದು ರೂಪಾಯಿ ಸಾಲ ಮನ್ನಾ ಮಾಡಿದ್ರಾ? ಬಡವರು ಹಸಿದು ಇರಬಾರದು ಎಂದು ಅನ್ನ ಭಾಗ್ಯ ಜಾರಿಗೆ ತಂದೆವು. 25 ಜನ ಎಂ.ಎಲ್.ಗೆ  25 ರಿಂದ 30 ಕೋಟಿ ರೂಪಾಯಿ ಆಫರ್ ಕೊಡುತ್ತಿದ್ದಾರೆ. ಇವರಿಗೆ ಅಷ್ಟೊಂದು ಹಣ ಎಲ್ಲಿಂದ ಬಂತು. ಕಾಂಗ್ರೆಸ್ ಜೆಡಿಎಸ್ ನಾಯಕರ ಮನೆ ಮೇಲೆ ಐಟಿ ದಾಳಿ ನಡೆಸಿದರು. ಬಿಜೆಪಿ ನಾಯಕರ ಮೇಲೆ ದೂರು ನೀಡಿದ್ದೇವೆ. ಅವರ ಮನೆಯ ಮೇಲೆ ಐಟಿ ದಾಳಿಯಾಗಿಲ್ಲ. 5 ವರ್ಷ ಮೈತ್ರಿ ಸರ್ಕಾರ ಸುಭದ್ರವಾಗಿರುತ್ತೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಾಹುಲ್ ಗಾಂಧಿ ನಾಳೆ ಕೆ.ಆರ್.ನಗರಕ್ಕೆ ಆಗಮಿಸಲಿದ್ದಾರೆ. ಎಲ್ಲಾ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು. ವಿಜಯ್ ಶಂಕರ್, ಧ್ರುವ ನಾರಾಯಣ, ಪ್ರಜ್ವಲ್ ರೇವಣ್ಣ, ನಿಖಿಲ್ ಮೈತ್ರಿ ಅಭ್ಯರ್ಥಿಗಳಾಗಿದ್ದು ಅವರಿಗೆ ನಿಮ್ಮ ಮತ ಹಾಕಿ ಎಂದು ಜನರಲ್ಲಿ ಮನವಿ ಮಾಡಿಕೊಂಡರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv