ಅದೇನೇ ಆಗಲಿ, ಟಿಪ್ಪು ಜಯಂತಿಯನ್ನ ಆಚರಿಸುತ್ತೇವೆ -ಸಿದ್ದರಾಮಯ್ಯ

ಬಾಗಲಕೋಟೆ: ನಾನು ಸಿಎಂ ಇದ್ದಾಗ ಟಿಪ್ಪು ಜಯಂತಿ ಮಾಡಿದೆ. ಅದಕ್ಕೆ ಬಹಳಷ್ಟು ವಿರೋಧ ಮಾಡಿದರು. ಟಿಪ್ಪು ಮತಾಂಧನಾಗಿರಲಿಲ್ಲ, ಟಿಪ್ಪು ದೇಶಪ್ರೇಮಿ, ಸ್ವಾತಂತ್ರ್ಯ-ಪ್ರೇಮಿ. ಅವರ ಬಗ್ಗೆ ಸುಮ್ನೆ ಅಪಪ್ರಚಾರ ಮಾಡಿದ್ರು. ಬಿಜೆಪಿಯವರು ಢೋಂಗಿಗಳು. ಟಿಪ್ಪು ಜಯಂತಿಗೆ ಬಿಡಲ್ಲ ಅಂತಾರೆ. ಅದೇನೇ ಆಗಲಿ, ಎಲ್ಲ ಜಯಂತಿಗಳ ರೀತಿ ಟಿಪ್ಪು ಜಯಂತಿಯನ್ನ ಆಚರಿಸುತ್ತೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಬದಾಮಿಯಲ್ಲಿ ಅಂಜುಮ್ ಎ ಇಸ್ಲಾಂ ಸಂಸ್ಥೆಗಳ ಆಶ್ರಯದಲ್ಲಿ ಅಭಿನಂದನೆ ಸ್ವಿಕರಿಸಿ ಮಾತನಾಡಿದ ಸಿದ್ದರಾಮಯ್ಯ, ನಾನು ಶಾದಿ ಭಾಗ್ಯ ತಂದಾಗ ಸದನದಲ್ಲಿ ಯಡಿಯೂರಪ್ಪ, ಶೋಭಾ ಕರಂದ್ಲಾಜೆ ವಿರೋಧಿಸಿದ್ರು. ಎಲ್ಲ ಧರ್ಮದಲ್ಲಿ ಬಡವರಿದ್ದಾರೆ. ಅವರಿಗೂ ಸವಲತ್ತು ಸಿಗಲಿ. ದೇಶದ ಸಂಪತ್ತು ಎಲ್ಲರಿಗೂ ಹಂಚಿಕೆ ಆಗಲಿ. ಪ್ರಧಾನಿ ಮೋದಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅಂತಾರೆ. ದೇಶದ ಹದಿನಾಲ್ಕು ಪರ್ಸೆಂಟ್ ಮುಸ್ಲಿಮರು, ಎರಡು ಪರ್ಸೆಂಟ್ ಕ್ರಿಶ್ಚಿಯನ್​​ರನ್ನ ಬಿಟ್ಟು ಹೇಗೆ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಆಗುತ್ತೆ ಎಂದು ಸಿದ್ದರಾಮಯ್ಯ, ಪ್ರಧಾನಿ ಮೋದಿ ಬಗ್ಗೆ ವ್ಯಂಗ್ಯವಾಡಿದರು.

ಜಮೀರ್ ಅಹಮ್ಮದ್ ಹಾಡಿ ಹೊಗಳಿದ ಸಿದ್ದರಾಮಯ್ಯ
ಸಚಿವ ಜಮೀರ್ ಎಲ್ಲರ ಜೊತೆ ಬೆರೆತು ಕೆಲಸ ಮಾಡುವ ಹೃದಯವಂತ. ಈ ಹಿಂದೆ ಜೆಡಿಎಸ್ ಬಿಟ್ಟು ಕಾಂಗ್ರೆಸ್​​ಗೆ ಬಾ ಅಂತಾ ಆಹ್ವಾನ ಕೊಟ್ಟಿದ್ದೆ. ತಮ್ಮ ಜೊತೆ ಜಮೀರ್ ಸೇರಿ ಏಳು ಜನ ಬಂದ್ರು. ಎಲ್ಲರಿಗೂ ಟಿಕೆಟ್ ಕೊಟ್ಟೆ, ಮೂವರು ಗೆದ್ದರು. ಜಮೀರ್ ತನ್ನ ಮಂತ್ರಿ ಮಾಡಿ ಅಂತಾ ಬಂದಿರಲಿಲ್ಲ. ಆದ್ರೂ ಕಾಂಗ್ರೆಸ್ ಪಕ್ಷ‌ ಅವರನ್ನ ಮಂತ್ರಿ ಮಾಡಿದೆ. ಜಮೀರ್​​ಗೆ ಮಂತ್ರಿ ಮಾಡಿದ್ರೆ ಬೇರೆಯವರು ಅಸಮಾಧಾನ ಆಗುತ್ತಾರೆ ಅಂದ್ರು. ಪರವಾಗಿಲ್ಲ, ಜಮೀರ್ ಕೆಲಸ ಮಾಡೋ ವ್ಯಕ್ತಿ, ಅದಕ್ಕೆ ಮಂತ್ರಿ ಮಾಡಿದ್ದೇವೆ ಎಂದು ಸಿದ್ದರಾಮಯ್ಯ, ಜಮೀರ್ ಅಹಮ್ಮದ್​​ನನ್ನ ಹಾಡಿ ಹೊಗಳಿದರು.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv