ಯಡಿಯೂರಪ್ಪ ಕೊಟ್ಟ ಮಾತಿನಂತೆ, ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ -ಸಿದ್ದರಾಮಯ್ಯ

ಬಾಗಲಕೋಟೆ: ಯಡಿಯೂರಪ್ಪ ಆಡಿಯೋದಲ್ಲಿರುವ ಧ್ವನಿ ನನ್ನದೆ ಆಗಿದ್ದರೆ ರಾಜೀನಾಮೆ ಕೊಡೋದಾಗಿ ಹೇಳಿದ್ದರು. ಈಗ ಒಪ್ಪಿಕೊಂಡಿದ್ದಾರೆ ರಾಜೀನಾಮೆ ಕೊಡಲಿ. ಲೆಟ್ ಹಿಮ್ ರಿಸೈನ್ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.  ಜಿಲ್ಲೆಯ ಬದಾಮಿ ತಾಲೂಕಿನ ಚಿಕ್ಕಮುಚ್ವಳಗುಡ್ಡ ಹೆಲಿಪ್ಯಾಡ್​​​​ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಿದ್ದರಾಮಯ್ಯ, ಯಡಿಯೂರಪ್ಪ ಕೊಟ್ಟ ಮಾತಿನಂತೆ ನಡೆದುಕೊಳ್ಳಲಿ. ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ ಎಂದು ಗುಡುಗಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಹುಬ್ಬಳ್ಳಿಯಲ್ಲಿ ನಡೆಸುವ ಸಭೆಯ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ, ನರೇಂದ್ರ ಮೋದಿಗೆ ಯಾವುದೇ ಪ್ರೊಟೊಕಾಲ್ ಏನೂ ಗೊತ್ತಿಲ್ಲ. ರಾಜಕೀಯ ಭಾಷಣ ಮಾಡೋಕೆ ಬಂದಿದ್ದಾರೆ. ನಾವು ಅವರನ್ನ ರಾಜಕೀಯವಾಗಿ ಎದುರಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv