‘ಮೂಡ್ ಬರೋದು ಬೇರೆ ಬೇರೆ ಕೆಲಸಗಳಿಗೆ’ ಮಾಜಿ ಸಿಎಂ ‘ಮೂಡ್’ ಪಾಠ..!

ಮೈಸೂರು:  ಮೂಡ್ ಅಂದ್ರೆ ಏನು.?, ಮೂಡ್ ಅಂದ್ರೆ ಬೇರೆ ಕಣಪ್ಪ. ಮೂಡ್ ಬರೋದು ಬೇರೆ ಬೇರೆ ಕೆಲಸಗಳಿಗೆ. ಈಗ ಇರೋದು ಜನರ ಅಭಿಪ್ರಾಯ ಅಷ್ಟೇ. ಜನರು ಕಾಂಗ್ರೆಸ್ ಪರವಾಗಿ, ಮೈತ್ರಿ ಅಭ್ಯರ್ಥಿ ಪರವಾಗಿ ಕೆಲಸ ಮಾಡಲು ನಿರ್ಧಾರ ಮಾಡಿದ್ದಾರೆ. ಅದು ಮೂಡ್ ಅಲ್ಲ, ಜನರ ಅಭಿಪ್ರಾಯ.  ನೀವ್ ಯಾವ್ ಮೂಡ್ ಅಲ್ಲಿ ಕೇಳ್ತಿದ್ದೀರೋ ನನಗೆ ಗೊತ್ತಿಲ್ಲ.  ಮಾಜಿ ಸಿಎಂ ಸಿದ್ದರಾಮಯ್ಯ ಎಂದು ಹಾಸ್ಯಸ್ಪದವಾಗಿ ಹೇಳಿಕೆ ನೀಡಿದ್ದಾರೆ

ಮೈಸೂರಿನಲ್ಲಿ ಮಾತನಾಡಿದ ಅವರು, ಐಟಿ ಕಚೇರಿ ಮುಂದೆ ಮೈತ್ರಿ ಪಕ್ಷಗಳ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ನನಗೂ ಐಟಿಯಿಂದ ನೋಟಿಸ್ ಬಂದಿದೆ
ಈಗಾಗಲೇ ಉತ್ತರ ಕೊಟ್ಟಿದ್ದೇನೆ. ಚುನಾವಣೆಯಲ್ಲಿ ಬಿಝಿಯಿದ್ದೇನೆ. ಉತ್ತರ ಕೊಡಲು 15 ದಿನ ಬೇಕೆಂದು ಉತ್ತರ ಕೊಟ್ಟಿದ್ದೇನೆ ಎಂದು ಹೇಳಿದ್ರು. ಇದೇ ವೇಳೆ ನಾನು, ಜಿ.ಟಿ.ದೇವೇಗೌಡ ಕ್ಷೇತ್ರ ಪ್ರವಾಸ ಮಾಡಿದ ಮೇಲೆ ವಾತಾವರಣ ಬದಲಾಗಿದೆ. ಜನ ಮೈತ್ರಿ ಅಭ್ಯರ್ಥಿ ಕಡೆ ಒಲವು ತೋರುತ್ತಿದ್ದಾರೆ. ನಮ್ಮ ಮೈತ್ರಿ ಅಭ್ಯರ್ಥಿ ಗೆಲುವು ನಿಶ್ಚಿತ ಎಂದು ಹೇಳಿದ್ರು. ಮೋದಿ ಮತ್ತೆ ಪ್ರಧಾನಿಯಾದ್ರೆ ರಾಜಕೀಯ ಸನ್ಯಾಸತ್ವ ತಗೋಳ್ತಿನಿ ಅನ್ನೋ ಮಾಜಿ ಪ್ರಧಾನಿ ದೇವೇಗೌಡರ  ಹೇಳಿಕೆ ವಿಚಾರವಾಗಿ ಮಾತನಾಡಿ, ಮೋದಿ ದೇವೇಗೌಡರ ಬಗ್ಗೆ ಹೇಳಿದ್ರೆ ನನ್ನನ್ನ ಯಾಕೆ ಕೇಳ್ತೀರಾ, ಹೋಗಿ ದೇವೇಗೌಡರನ್ನೆ ಕೇಳಿ ಎಂದು ಅವರು ಹೇಳಿದ್ರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv