‘ಮೈತ್ರಿ ಅಭ್ಯರ್ಥಿಗಳು ಗೆದ್ರೆ ಮಾತ್ರ ಮೈತ್ರಿ ಸರ್ಕಾರಕ್ಕೆ ಉಳಿಗಾಲ’

ಮೈಸೂರು: ಮೈತ್ರಿ ಅಭ್ಯರ್ಥಿಗಳು ಗೆದ್ದರೆ ಮೈತ್ರಿ ಸರ್ಕಾರಕ್ಕೆ ಉಳಿಗಾಲ. ಇಲ್ಲವಾದ್ರೆ ಮೈತ್ರಿ ಸರ್ಕಾರ ನಡೆಸೋದು ಕಷ್ಟವಾಗುತ್ತೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದ ಜಯಪುರದಲ್ಲಿ ನಡೆಯುತ್ತಿರುವ ಜೆಡಿಎಸ್-ಕಾಂಗ್ರೆಸ್ ಜಂಟಿ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಮತ್ತೊಮ್ಮೆ ಚುನಾವಣೆಗೆ ನಾನು ನಿಲ್ಲಲ್ಲ ಎಂದು ಸಿದ್ದರಾಮಯ್ಯ ಪುನರ್ ಉಚ್ಚರಿಸಿದರು. ಈ‌ ಕ್ಷೇತ್ರದಲ್ಲಿ ಚುನಾವಣೆಗೆ ನಾನು ಮತ್ತೆ ನಿಲ್ಲಲ್ಲ. ಈ ಕ್ಷೇತ್ರದ ಅಭಿವೃದ್ಧಿಯಾಗಬೇಕು. ಐದು ಬಾರಿ ನನಗೆ ರಾಜಕೀಯ ಮಾಡಲು ಅವಕಾಶ ಮಾಡಿಕೊಟ್ಟಿದ್ದಿರಾ? ಆ ದೃಷ್ಟಿಯಿಂದ ಸಿ.ಹೆಚ್.ವಿಜಯ್ ಶಂಕರ್​​​ಗೆ ಮತ ಹಾಕಿ. ನಾನು ದೇವೇಗೌಡ ಮಾತೇ ಆಡುತ್ತಿರಲಿಲ್ಲ. ಐದು ದಿನಗಳಿಂದ ಒಟ್ಟಾಗಿ ಹೋಗ್ತಿದ್ದೇವೆ. ಈ ದೇಶ ಸಂವಿಧಾನ ಉಳಿಯಬೇಕು ಅಂದ್ರೆ ನಾವು ಒಂದಾಗಬೇಕಿರೋದು ಅನಿವಾರ್ಯ ಎಂದು ಹೇಳಿದ್ದಾರೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv