‘ಚೆನ್ನಮ್ಮಗೆ ರಾಜ್ಯಸಭೆ ಸದಸ್ಯರನ್ನಾಗಿ ಮಾಡಿಬಿಟ್ರೆ, ಅದು ಪರಿಪೂರ್ಣ ರಾಜಕೀಯ ಕುಟುಂಬ ಆಗುತ್ತೆ’

ಹುಬ್ಬಳ್ಳಿ: ದೇಶದ ಅಗತ್ಯಕ್ಕೆ ಮೋದಿ ಪ್ರಧಾನಿಯಾಗಬೇಕಿದೆ. ದೇಶ ಶಾಂತ ರೀತಿಯಿಂದ ಇರಬೇಕೆಂದ್ರೆ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು. ಕಾಂಗ್ರೆಸ್‌ನವರು ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಹುಬ್ಬಳ್ಳಿಯ ಗಾಮನಗಟ್ಟಿಯಲ್ಲಿ ನಡೆದ ಬಿಜೆಪಿ ಚುನಾವಣಾ ಪ್ರಚಾರದ ಸಭೆಯಲ್ಲಿ ಮಾತನಾಡಿದ ಜಗದೀಶ್ ಶೆಟ್ಟರ್, ರಾಹುಲ್ ಗಾಂಧಿ ಮದುವೆಯಾಗಿಲ್ಲ, ಪ್ರಿಯಾಂಕಾ ಗಾಂಧಿ ಮಕ್ಕಳು ಪಪ್ಪು ಗಾಂಧಿ ಮುಂದೆ ಪ್ರಧಾನಿಯಾಗಲು ಮುಂದಾಗುತ್ತಾರೆ. ಜೆಡಿಎಸ್ ಅಪ್ಪ ಮಕ್ಕಳ ಪಕ್ಷ ಅಲ್ಲ, ಅಪ್ಪ ಮಕ್ಕಳು ಮೊಮ್ಮಕ್ಕಳ ಪಕ್ಷ. ದೇವೇಗೌಡ್ರು ಪತ್ನಿ ಚೆನ್ನಮ್ಮ ಅವರಿಗೆ ರಾಜ್ಯಸಭೆ ಸದಸ್ಯರನ್ನಾಗಿ ಮಾಡಿ ಬಿಟ್ಟರೆ ಪರಿಪೂರ್ಣ ರಾಜಕೀಯ ಕುಟುಂಬ ಆಗುತ್ತೆ ಎಂದರು.

ರಾಜ್ಯದಲ್ಲಿ 22 ರಿಂದ 24 ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುತ್ತದೆ. ಕಾಂಗ್ರೆಸ್- ಜೆಡಿಎಸ್ ಕುಟುಂಬ ರಾಜಕಾರಣ‌ ಮಾಡುತ್ತಿದೆ. ಅಪ್ಪ, ಮಗ, ಮೊಮ್ಮಕ್ಕಳು ಎಲ್ಲರೂ ಚುನಾವಣೆಗೆ ನಿಂತಿದ್ದಾರೆ. ದೇವೇಗೌಡರ ಪತ್ನಿ ಚೆನ್ನಮ್ಮ ಅವರನ್ನ ಕೂಡಾ ರಾಜ್ಯಸಭೆ ಸದಸ್ಯರಾಗಿ ಮಾಡಿದ್ರೆ ಒಳ್ಳೆಯದು ಎಂದು ಜಗದೀಶ್ ಶೆಟ್ಟರ್, ದೇವೇಗೌಡರ ರಾಜಕೀಯವನ್ನ ವ್ಯಂಗ್ಯ ಮಾಡಿದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv