ರಾಜಕೀಯ ಮರೆತು ನಾಯಕರು ‘ಕುಮಾರ ಭೋಜನ’ದಲ್ಲಿ ಭಾಗಿ..!

ಬೆಂಗಳೂರು: ವಿಧಾನ ಮಂಡಲದಲ್ಲಿ ಬಜೆಟ್​ ಮಂಡಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್​​.ಡಿ ಕುಮಾರಸ್ವಾಮಿ ಶಾಸಕರಿಗೆ ಇಂದು ವಿಧಾನಸೌಧದ ಬ್ಯಾಕ್ವೆಂಟ್ ಹಾಲ್​​​​ನಲ್ಲಿ ಭೋಜನಾ ಕೂಟವನ್ನು ಆಯೋಜಿಸಿದ್ದರು. ಈ ಕೂಟದಲ್ಲಿ ರಾಜಕೀಯ ಮರೆತು ಎಲ್ಲಾ ನಾಯಕರು ಪಾಲ್ಗೊಂಡಿದ್ದರು. ಸಿ.ಎಂ ಎಚ್.ಡಿ ಕುಮಾರಸ್ವಾಮಿ, ಮಾಜಿ ಸಿ.ಎಂ ಸಿದ್ದರಾಮಯ್ಯ, ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಬಿ.ಎಸ್ ಯಡಿಯೂರಪ್ಪ, ಡಿಸಿಎಂ ಪರಮೇಶ್ವರ್ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಒಂದೇ ಟೇಬಲ್​​​​​ನಲ್ಲಿ ಕುಳಿತು ಭೋಜನ ಮಾಡಿದ್ದು ಗಮನ ಸೆಳೆಯಿತು.

ಸಮನ್ವಯ ಸಮಿತಿಯ ನಾಯಕ, ಶಾಸಕ ಸಿದ್ದರಾಮಯ್ಯ ಬರುವವರೆಗೂ ಸಿ.ಎಂ ಎಚ್​​.ಡಿ ಕುಮಾರಸ್ವಾಮಿ ಬ್ಯಾಕ್ವೆಂಟ್ ಹಾಲ್​​ನ ದ್ವಾರದ ಮುಂದೆ ನಿಂತು ಕಾಯುತ್ತಿದ್ದರು. ಸಿದ್ದರಾಮಯ್ಯ ಬಂದ ಬಳಿಕ ಕೈ ಹಿಡಿದು ಟೇಬಲ್ ಹತ್ತಿರ ಕರೆದುಕೊಂಡು ಹೋದರು. ಇನ್ನು ಸಿದ್ದರಾಮಯ್ಯ ಜೊತೆ ಕುಮಾರಸ್ವಾಮಿ ಊಟ ಮಾಡುತ್ತಿದ್ದ ವೇಳೆ ಯಡಿಯೂರಪ್ಪ ಬರೋದನ್ನ ಗಮನಿಸಿ, ಅರ್ಧಕ್ಕೆ ಊಟ ಬಿಟ್ಟು, ಯಡಿಯೂರಪ್ಪ ಅವರನ್ನು ಬರಮಾಡಿಕೊಂಡರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv