ಆನೆ ದಾಳಿಗೆ ಫಾರೆಸ್ಟ್ ವಾಚರ್​ ಸಾವು

ಆನೇಕಲ್: ಆನೆ ದಾಳಿಗೆ ಫಾರೆಸ್ಟ್ ವಾಚರ್ ಬಲಿಯಾಗಿರುವ ಘಟನೆ ಆನೆಕಲ್​ ತಾಲೂಕಿನ ಡೆಂಕಣಿ ಕೋಟೆ ಗ್ರಾಮದಲ್ಲಿ ನಡೆದಿದೆ. ಮಾರಪ್ಪನ್(48) ಆನೆ ದಾಳಿಯಿಂದ ಮೃತಪಟ್ಟ ಫಾರೆಸ್ಟ್ ವಾಚರ್. ನಿನ್ನೆ ಡೆಂಕಣಿ ಕೋಟೆ ಗ್ರಾಮಕ್ಕೆ ಕಾಡಾನೆಗಳು ನುಗ್ಗಿದ್ದವು. ಈ ವೇಳೆ ಅವುಗಳನ್ನ ಕಾಡಿಗಟ್ಟಲು ಹೋದಾಗ  ಮಾರಪ್ಪನ್​ ಆನೆ ದಾಳಿಗೊಳಗಾಗಿ ಮೃತಪಟ್ಟಿದ್ದಾರೆ. ಇನ್ನೊಂದೆಡೆ ಅದೇ ಗ್ರಾಮದಲ್ಲಿ ಯುವಕನೊರ್ವ ಆನೆಗಳನ್ನು ಕೆರಳಿಸುವ ವಿಡಿಯೋವೊಂದು ವೈರಲ್ ಆಗಿದೆ. ಗ್ರಾಮಕ್ಕೆ ನುಗ್ಗಿದ್ದ ಆನೆಗಳನ್ನು ಆತ ಕಲ್ಲಿನಿಂದ ಹೊಡೆದು ಕೆರಳಿಸಲು ಮುಂದಾಗಿದ್ದಾನೆ. ಆನೆ ಮುಂದೆ ನಿಂತು ಕಲ್ಲಿನಿಂದ ಹೊಡೆದು, ಕೂಗಾಡುತ್ತ ಚೇಷ್ಟೆ ಮಾಡಿದ್ದಾನೆ. ಇದ್ರಿಂದ ಕೆರಳಿದ ಆನೆ ಆತನನ್ನ ಓಡಿಸಿಕೊಂಡು ಬರುತ್ತಿದ್ದಂತೆ ವಾಪಸ್​ ಓಡಿದ್ದಾನೆ. ಈ ವೀಡಿಯೋ ಸ್ಥಳೀಯರೊಬ್ಬರ ಮೊಬೈಲ್​ನಲ್ಲಿ ಸೆರೆಯಾಗಿದೆ.