ಚಿರತೆಯಲ್ಲ, ಬೆಕ್ಕು

ಕೊಡಗು: ಚಿರತೆಯನ್ನು ಹೋಲುವ ಪ್ರಾಣಿಯೊಂದು ಕೊಡಗು ಜಿಲ್ಲೆಯ ಚೆರಿಯಪರಂಬುವಿನ ಸಂಶು ಎಂಬವರ ಮನೆಯಲ್ಲಿ ಇಂದು ಬೆಳಗ್ಗೆ ಕಂಡುಬಂದಿದೆ. ಚಿರತೆ ಮರಿ ಎಂದು ಆತಂಕಗೊಂಡ ಸ್ಥಳೀಯರು ಎರಡು ಮರಿಗಳನ್ನ ಹಿಡಿದಿಟ್ಟಿದ್ದಾರೆ. ನಂತರ ಚಿರತೆ ಮರಿಯಲ್ಲ, ಕಾಡುಬೆಕ್ಕು ಜಾತಿಯ ಪ್ರಾಣಿ ಅಂತಾ ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಸದ್ಯ ಮರಿಗಳು ಅರಣ್ಯಾಧಿಕಾರಿಗಳ ವಶದಲ್ಲಿದ್ದು ಜಿಲ್ಲೆಯ ಇನ್ನಿತರ ಭಾಗಗಳಲ್ಲಿ ಮರಿಗಳು ತಮ್ಮ ವಾಸ್ತವ್ಯ ಹೂಡಿರಬಹುದೆಂದು ಶಂಕಿಸಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv