ಸಿ.ಎಸ್.ಶಿವಳ್ಳಿ ಅಗಲಿಕೆ ಕಾಂಗ್ರೆಸ್‌ಗೆ ತುಂಬಲಾರದ ನಷ್ಟ: ಸತೀಶ್ ಜಾರಕಿಹೊಳಿ

ಹುಬ್ಬಳ್ಳಿ: ಅರಣ್ಯ ಸಚಿವ ಸತೀಶ ಜಾರಕಿಹೊಳಿ ಯರಗುಪ್ಪಿ ಗ್ರಾಮಕ್ಕೆ ಆಗಮಿಸಿ ಸಿ.ಎಸ್‌ ಶಿವಳ್ಳಿ ಅವರ ಅಂತಿಮ ದರ್ಶನ ಪಡೆದರು. ಬಳಿಕ ಮಾತನಾಡಿದ ಅವರು, ಸಿ.ಎಸ್ ಶಿವಳ್ಳಿ ಅವರ ಸಾವು ಎಲ್ಲರಿಗೂ ನೋವು ತಂದಿದೆ. ಅವರ ಅಗಲಿಕೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಮತ್ತು ಉತ್ತರ ಕರ್ನಾಟಕ ಭಾಗಕ್ಕೆ ತುಂಬಲಾರದ ನಷ್ಟವಾಗಿದೆ. ಅವರು ಶಾಸಕ ಸಚಿವರಷ್ಟೆ ಅಲ್ಲದೇ ಒಬ್ಬ ಹೋರಾಟಗಾರರು ಆಗಿದ್ದರು. ಮಹಾದಾಯಿ ವಿಚಾರದಲ್ಲಿ ಹೋರಾಟ ಮಾಡಿದಂತಹ ವ್ಯಕ್ತಿಯಾಗಿದ್ದರು.  ಅವರ ಅಗಲಿಕೆಯಿಂದ ಕುಟುಂಬಕ್ಕೆ ಮತ್ತು ಬೆಂಬಲಿಗರಿಗೆ ದೇವರು ದೈರ್ಯ ತುಂಬುವ ಶಕ್ತಿ ನೀಡಲಿ ಎಂದು ಸಚಿವ ಸತೀಶ್ ಜಾರಿಕಿಹೊಳಿ ಕಂಬನಿ ಮಿಡಿದಿದ್ದಾರೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv