ಡ್ರಂಕ್ & ಡ್ರೈವ್ ಕೇಸಲ್ಲಿ ಅರೆಸ್ಟ್ ಆದ ‘ಡ್ರಿಂಕ್​ವಾಟರ್’..!

ಲಂಡನ್​: ಕೆಲವೊಮ್ಮೆ ವ್ಯಕ್ತಿಯ ಹೆಸರು ಹಾಗೂ ಅವರು ಮಾಡುವ ಕೆಲಸ ಕಾಕತಾಳಿಯವಾಗಿ ಪರಿಣಮಿಸಬಹುದು. ಇನ್ನೂ ಕೆಲವೊಮ್ಮೆ ತಮ್ಮ ಹೆಸರಿಗೆ ವಿರುದ್ಧವಾದ ವರ್ತನೆಗಳನ್ನ ತೋರಬಹುದು. ಇದಕ್ಕೆ ಎಕ್ಸಾಂಪಲ್ ಇಲ್ಲಿದೆ . ಡೆನ್ನಿ ಡ್ರಿಂಕ್​ವಾಟರ್​ ಎಂಬ ಹೆಸರಿನ ಚೆಲ್ಸಾ ಫುಟ್​ಬಾಲ್​ ಕ್ಲಬ್​ನ ಆಟಗಾರ ತನ್ನ ಹೆಸರಿಗೆ ವಿರುದ್ಧವಾದ ಕೆಲಸ ಮಾಡಿದ್ದಾನೆ. ಈ ಡ್ರಿಂಕ್ ವಾಟರ್, ಡ್ರಂಕ್ ಌಂಡ್​ ಡ್ರೈವ್ ಕೇಸ್​ನಲ್ಲಿ ತಗ್ಲಾಕೊಂಡಿದ್ದಾನೆ.

ನಟ್ಸ್​ಫರ್ಡ್​ ನಗರದ ಚೆಷೈರ್​​ನಲ್ಲಿ 29 ವರ್ಷದ ಡ್ರಿಂಕ್​ವಾಟರ್, ಡ್ರಂಕ್​ ಌಂಡ್ ಡ್ರೈವ್ ಮಾಡಿ ಪೊಲೀಸರ ಅತಿಥಿಯಾಗಿದ್ದಾನೆ. ಡೆನ್ನಿ ಡ್ರಿಂಕ್​ವಾಟರ್​, ಡ್ರಂಕ್ ಌಂಡ್​ ಡ್ರೈವ್ ಮಾಡಿದ್ದರಿಂದ ಕಾರು ಅಪಘಾತವಾಗಿ ಇಬ್ಬರು ಮಹಿಳೆಯರು ಹಾಗೂ ಓರ್ವ ಪುರುಷನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸದ್ಯ ಡ್ರಿಂಕ್​ವಾಟರ್​ನನ್ನ ಬೇಷರತ್ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ. ಮೇ 13ಕ್ಕೆ ಮುಂದಿನ ವಿಚಾರಣೆಗೆ ಹಾಜರಾಗುವಂತೆ ಸ್ಟೋಕ್​ಪೋರ್ಟ್​ ಮ್ಯಾಜಿಸ್ಟ್ರೇಟ್ ಕೋರ್ಟ್​ ಸೂಚಿಸಿದೆ.

ಹೆಸರಿಗೆ ತಕ್ಕಂತೆ ಡೆನ್ನಿ ಡ್ರಿಂಕ್​ವಾಟರ್​ ನೀರು ಕುಡಿದುಕೊಂಡಿದ್ದರೆ ಪೊಲೀಸ್​ ಸ್ಟೇಷನ್ ಮತ್ತು ಕೋರ್ಟ್​ ಮೆಟ್ಟಿಲೇರೋದು ತಪ್ಪುತ್ತ್ತಿತ್ತು. ಆದ್ರೆ ನೀರಿನ ಬದಲು ಎಣ್ಣೆ ಒಳಹೋಗಿದ್ರಿಂದ ಫಜೀತಿ ಪಡುವಂತಾಯ್ತು.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv