ಪಾದಗಳನ್ನು ಅಂದವಾಗಿ ಇಟ್ಟುಕೊಳ್ಳಲು ಇಲ್ಲಿದೆ ಟಿಪ್ಸ್!

ಬ್ಯೂಟಿಕೇರ್​​ನಲ್ಲಿ ಕೇವಲ ಮುಖವಷ್ಟೇ ಅಲ್ಲ, ಕೈಗಳ ಹಾಗೂ ಪಾದಗಳ ಆರೈಕೆ ಕೂಡಾ ಅಷ್ಟೇ ಮುಖ್ಯ. ಪಾದದ ಸೌಂದರ್ಯ ಮತ್ತು ಆರೈಕೆಗಾಗಿ ಒಂದಿಷ್ಟು ಹೊತ್ತು ಟೈಂ ಸ್ಪೆಂಡ್ ಮಾಡಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಪಾದದ ಆರೈಕೆ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಾರೆ. ಕೆಲಸದ ಒತ್ತಡದಿಂದ ಬ್ಯೂಸಿಯಾಗಿರೋದ್ರಿಂದ ಪಾದದ ಆರೋಗ್ಯದ ಕಡೆ ಗಮನ ಹರಿಸಲ್ಲ. ಪಾದಗಳನ್ನು ಅಂದವಾಗಿ, ಆರೋಗ್ಯವಾಗಿ ಇಟ್ಟುಕೊಳ್ಳಲು ಮನೆಯಲ್ಲೇ ಮಾಡಬಹುದಾದ ಆರೈಕೆ  ಕುರಿತು ಟಿಪ್ಸ್‌ ಇಲ್ಲಿವೆ.

ಫುಟ್ ಸೋಕ್​​​: ಒಂದು ಟಬ್‌ನಲ್ಲಿ ಪಾದ ಮುಳುಗುವಷ್ಚು ಬೆಚ್ಚಗಿನ ನೀರನ್ನು ತೆಗೆದುಕೊಳ್ಳಿ. ಇದಕ್ಕೆ ಯಾವುದಾದ್ರೂ ಎಸೆನ್ಶಿಯಲ್ ಆಯಿಲ್​​​ ಹಾಗೂ ಉಪ್ಪು ಹಾಕಿ ಪಾದಗಳನ್ನು ನೆನೆಿಸಿಡಿ. 15 ನಿಮಿಷಗಳ ಕಾಲ ನೀರಿನಲ್ಲಿ ಪಾದಗಳನ್ನು ಇಟ್ಟು, ನಂತರ ಸ್ವಲ್ಪ ಸ್ಕ್ರಬ್​​ ಮಾಡಿ ತೊಳೆಯಿರಿ. ಬಳಿಕ ಮಾಯ್​​ಶ್ಚರೈಸರ್‌ನಿಂದ ಮಸಾಜ್ ಮಾಡಿ. ಇದು ನಿಮ್ಮ ಪಾದಗಳ ಮೆರಗನ್ನು ಹೆಚ್ಚಿಸುತ್ತದೆ. ಪಾದಗಳನ್ನ ಮೃದುವಾಗಿಸುತ್ತದೆ ಹಾಗೂ ಒಣಗದಂತೆ ತಡೆಯುತ್ತದೆ.

ಪಾದದ ಮಾಸ್ಕ್: ಪಾದದ ಮಾಸ್ಕ್ ಪಾದಗಳಲ್ಲಿರುವ ನಿರ್ಜೀವ ಕೋಶಗಳನ್ನು ಸುಲಭವಾಗಿ ತೆಗೆದುಹಾಕುವಲ್ಲಿ ಸಹಕಾರಿ. ಇದು ಪಾದಗಳ ಸ್ವಚ್ಛತೆ ಹಾಗೂ ಆರೋಗ್ಯವನ್ನು ಕಾಪಾಡುತ್ತದೆ. ಪಾರ್ಲರಿಗೆ ಹೋಗುವ ಬದಲು, ಮನೆಯಲ್ಲೇ ಇದನ್ನು ಮಾಡಬಹುದು. ನೀವು ಮುಖಕ್ಕೆ ಬಳಸುವ ಫೇಸ್ ಮಾಸ್ಕ್​​ ಪಾದದ ಮೇಲೂ ಬಳಸಬಹುದು. ಮಾಸ್ಕ್​​ ಹಚ್ಚಿ, 10 ನಿಮಿಷಗಳ ನಂತರ ತೊಳೆದು, ಬಟ್ಟೆಯಿಂದ ಒರೆಸಿ, ಮಾಯ್​​ಶ್ಚರೈಸರ್ ಹಚ್ಚಿ.

ಫುಟ್ ಸ್ಕ್ರಬ್: ಪಾದವು ಸೀಳಿದಂತಾಗಿ, ಒಡೆದಿದ್ದರೆ ಅದು ಸೋಂಕಿಗೆ ಕಾರಣವಾಗಬಹುದು. ಹೀಗಾಗಿ ಪ್ರತಿ ದಿನ ಹಿಮ್ಮಡಿಗೆ ಮಾಯ್​ಶ್ಚರೈಸಿಂಗ್​​ ಕ್ರೀಂ ಬಳಸುವ ಜೊತೆಗೆ ನಿಯಮಿತವಾಗಿ ಫುಟ್ ಸ್ಕ್ರಬಿಂಗ್ ಮಾಡಿ. ಪಾದಗಳಲ್ಲಿನ ಡೆಡ್ ಸ್ಕಿನ್ ತೆಗೆದುಹಾಕಲು ಸ್ಕ್ರಬ್ ಉತ್ತಮ.

ಆಕ್ಯುಪ್ರೆಶರ್ ಮಸಾಜ್: ಪಾದದ ಕಾಳಜಿ, ರಕ್ಷಣೆ, ಉಗುರುಗಳಿಗೆ ಶೇಪ್ ಕೊಟ್ಟು ನೀಟಾಗಿ ಇಟ್ಟುಕೊಳ್ಳುವುದು ಮುಖ್ಯ. ಫುಟ್ ಮಸಾಜ್ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ಮಸಾಜ್ ದೇಹದಲ್ಲಿನ ರಕ್ತ ಚಲನೆಯನ್ನು ಹೆಚ್ಚಿಸುತ್ತದೆ. ಹೀಗಾಗಿ ಸಮಯ ಸಿಕ್ಕಾಗ ನಿಮ್ಮ ಪಾದಗಳನ್ನ ತೊಳೆದು, ನೀಟಾಗಿ ಒರೆಸಿ, ಒಂದೆರಡು ನಿಮಿಷ ಮಸಾಜ್ ಮಾಡಿ.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv