ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಮನೆಯಲ್ಲೇ ಇದೆ ಮದ್ದು..!

ಅಧಿಕ ರಕ್ತದೊತ್ತಡ ಜೀವಕ್ಕೆ ಆಪತ್ತು ತರುತ್ತದೆ. ಹೈ ಬಿಪಿಯಿಂದ ಹಾರ್ಟ್‌ ಅಟ್ಯಾಕ್‌ ಆಗೋ ಭೀತಿ ಕಾಡುತ್ತಿರುತ್ತೆ. ಬಿಪಿ ಮಾತ್ರೆ ಒಂದು ದಿನ ತೆಗೆದುಕೊಳ್ಳದಿದ್ದರೂ, ಅವರ ದೈನಂದಿನ ಚಟುವಟಿಕೆಗಳೇ ಏರುಪೇರಾಗಿ ಹೋಗುತ್ತದೆ. ಅಂಥವರಿಗೆ ಮನೆಯಲ್ಲೇ ಒಂದಿಷ್ಟು ಇದೆ ಮದ್ದು. ಒಂದಷ್ಟು ಆಹಾರಗಳನ್ನ ಸೇವಿಸಿದ್ರೆ, ನಿಮ್ಮ ಬಿಪಿಯನ್ನ ಕಂಟ್ರೋಲ್​ನಲ್ಲಿಡಬಹುದು.(ವೈದ್ಯರ ಸಲಹೆ ಪಡೆದು ಮುಂದುವರಿದಾಗ)

1. ಬದಾಮಿ: ಬದಾಮಿಯಲ್ಲಿ ಹೇರಳವಾಗಿ ಮೆಗ್ನೀಶಿಯಮ್ ಇರುತ್ತದೆ. ಪ್ರತಿನಿತ್ಯ ಒಂದು ಬದಾಮಿ ಸೇವನೆಯಿಂದ ನಮ್ಮ ದೇಹಕ್ಕೆ ಬೇಕಾದ ಶೇ. 20 ರಷ್ಟು ಮೆಗ್ನೀಸಿಯನ್‌ ದೊರೆಯುತ್ತದೆ.

2. ಬೀಟ್ ರೂಟ್‌: ರಕ್ತದೊತ್ತಡ ನಿವಾರಣೆಗೆ ಬೀಟ್‌ರೂಟ್‌ ಕೂಡ ಉತ್ತಮ ಆಹಾರ. ನೈಸರ್ಗಿಕವಾಗಿ ದೊರೆಯುವ ಇದರಲ್ಲಿ ಹೆಚ್ಚಿನ ಪ್ರಮಾಣ ನೈಟ್ರಿಕ್ ಆಕ್ಸಿಡ್‌ ಇರುತ್ತದೆ. ಇದು ರಕ್ತನಾಳಗಳ ಹಿಗ್ಗುವಿಕೆ ತಪ್ಪಿಸುತ್ತದೆ. ಇದನ್ನು ಹಾಗೆ ಸೇವಿಸಬಹುದು, ಅಥವಾ ಜ್ಯೂಸ್ ಮಾಡಿ ಕುಡಿಯಬಹುದು, ಬೇಯಿಸಿಯೂ ತಿನ್ನಬಹುದು.

3. ಅಂಜೂರ ಹಣ್ಣು: ಅಂಜೂರದ ಹಣ್ಣಿನಲ್ಲಿ ಪೊಟ್ಯಾಷಿಯಮ್ ಹೆಚ್ಚಾಗಿರುತ್ತದೆ. ಇದು ರಕ್ತದ ಒತ್ತಡ ನಿಯಂತ್ರಿಸಲು ದೇಹಕ್ಕೆ ಬೇಕಾದ ಅಗತ್ಯವಾದ ಪೊಟ್ಯಾಷಿಯಮ್‌ ಒದಗಿಸುತ್ತೆ.

4. ಅಗಸೆ ಬೀಜಗಳು: ಅಗಸೆ ಬೀಜಗಳು ಅಧಿಕ ರಕ್ತದೊತ್ತಡಕ್ಕೆ ರಾಮಬಾಣವಾಗಿದೆ. ಇದರಲ್ಲಿನ ಔಷಧೀಯ ಗುಣ ರಕ್ತದೊತ್ತಡ ನಿಯಂತ್ರಿಸಲು ಸಹಾಯ ಮಾಡುತ್ತದೆ.

5.ದ್ರಾಕ್ಷಿ: ಕೆಂಪು ಮತ್ತು ನೇರಳೆ ಬಣ್ಣದ ದ್ರಾಕ್ಷಿ ಸೇವನೆ, ರಕ್ತ ದೊತ್ತಡವನ್ನು ಹತೋಟಿಯಲ್ಲಿಡುತ್ತೆ. ಇದರಲ್ಲಿನ ರೆಸ್ಟೆರಾಟ್ರೋಲ್‌, ರಕ್ತನಾಳಗಳ ಹಿಗ್ಗುವಿಕೆಯನ್ನು ನಿಯಂತ್ರಿಸುತ್ತದೆ. ಜೊತೆಗೆ ಹೃದಯ ಸಂಬಂಧಿ ಕಾಯಿಲೆಗಳನ್ನು ಕೂಡ ತಡೆಗಟ್ಟಲು ಸಹಾಯಕವಾಗಿದೆ.

6.  ಪಾಲಕ್ ಸೊಪ್ಪು: ಹಸಿರು ಸೊಪ್ಪುಗಳನ್ನು ಸೇವನೆ ಮಾಡೋದ್ರಿಂದ ರಕ್ತ ದೊತ್ತಡವನ್ನು ಸಮತೋಲನದಲ್ಲಿ ಇಟ್ಟುಕೊಳ್ಳಬಹುದು. ಪಾಲಕ್‌ ಸೊಪ್ಪು ಸೇವನೆ ರಕ್ತದೊತ್ತಡದ ಅಪಾಯವನ್ನು ಕಡಿಮೆ ಮಾಡುತ್ತೆ.

7. ಮಾವಿನ ಹಣ್ಣು: ಮಾವಿನ ಹಣ್ಣು ಸೇವಿಸೋದ್ರಿಂದ ರಕ್ತದ ಕೊರತೆ ತಡೆಗಟ್ಟಬಹುದು. ಮಾವು ಸೇವನೆ ಕೇವಲ 2 ಗಂಟೆಯಲ್ಲೇ ರಕ್ತದೊತ್ತಡ ಕಡಿಮೆ ಮಾಡುತ್ತೆ ಅಂತ ಸಂಶೋಧಕರು ಕಂಡುಕೊಂಡಿದ್ದಾರೆ.

8. ಟೊಮ್ಯಾಟೋ: ಪ್ರತಿಯೊಬ್ಬರ ಮನೆಯಲ್ಲೂ ದಿನ ನಿತ್ಯದ ಅಡುಗೆಗೆ ಟೊಮ್ಯಾಟೋ ಬಳಸೇ ಬಳಸುತ್ತಾರೆ. ಟೊಮ್ಯಾಟೋ ಸೇವನೆ ಮಾಡೋದ್ರಿಂದ ಹೃದ್ರೋಗ ಸಮಸ್ಯೆಯ ಅಪಾಯವ ತಡೆಗಟ್ಟಬಹುದಾಗಿದೆ. ಜೊತೆಗೆ ರಕ್ತದೊತ್ತಡ ನಿಯಂತ್ರಿಸಬಹುದು.

9. ಕಲ್ಲಂಗಡಿ: ಕಲ್ಲಂಗಡಿಯಲ್ಲಿ ಅಮಿನೋ ಆಸಿಡ್‌ ಆರ್ಗಿನೈನ್‌ ಹೇರಳವಾಗಿ ಇರುತ್ತದೆ. ಇದು ರಕ್ತ ಹೆಪ್ಪುಗಟ್ಟದಂತೆ ನೋಡಿಕೊಳ್ಳುತ್ತದೆ. ನೈಟ್ರಿಕ್ ಆಸಿಡ್‌ ರಕ್ತಸಂಚಾರ ಸುಮಗಮಗೊಳಿಸುತ್ತದೆ. ಹಾರ್ಟ್‌ ಸಂಬಂಧಿ ಕಾಯಿಲೆಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.

10.ವಾಲ್ನಟ್ಸ್: ವಾಲ್ನಟ್ಸ್‌ ಸೇವನೆ ಮಾಡೋದ್ರಿಂದ ಹೃದಯರಕ್ತನಾಳದಿಂದ ಸಂಭವಿಸಬಹುದಾದ ಅಪಾಯವನ್ನು ತಡೆಗಟ್ಟಬಹುದು. ಇದರಲ್ಲಿ ಒಮೆಗಾ 3 ಕೊಬ್ಬಿನ ಆಮ್ಲಗಳು ಧಾರಾಳವಾಗಿರುತ್ತದೆ. ಅದು ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ.

ವಿಶೇಷ ಬರಹ: ರುದ್ರಮ್ಮ ಕೆ.ಎಂ