4 ವರ್ಷಗಳಿಂದ ಕಡಿಮೆಯಾಗುತ್ತಿರುವ ಆಹಾರ ಬೆಲೆಗಳು..!

ಆಹಾರ ಪದಾರ್ಥಗಳ ಬೆಲೆಗಳು ಕಳೆದ ಎರಡು ಆರ್ಥಿಕ ವರ್ಷಗಳಲ್ಲಿ ಒಂದೇ ಸಮನೆ ಕಡಿಮೆ ದರದಲ್ಲಿಯೇ ಇವೆ. 27 ವರ್ಷಗಳ ಹಿಂದೆ ಇಂತಹ ಚೇತೋಹಾರಿ ಪರಿಸ್ಥಿತಿ ಕಂಡುಬಂದಿತ್ತು. ಗ್ರಾಹಕ ದರ ಸೂಚ್ಯಂಕ ಆಧಾರದಲ್ಲಿ ಲೆಕ್ಕ ಹಾಕಲಾಗುವ ಈ ಆಹಾರ ಹಣದುಬ್ಬರವು ಕ್ರಿಸಿಲ್​ ಸಂಸ್ಥೆಯ ಪ್ರಕಾರ ಶೇ. 0.1 ದರದಲ್ಲಿ ಮಾತ್ರವೇ ಏರಿಕೆ ಕಂಡಿದೆ. 1999-2000 ಸಾಲಿನಲ್ಲಿ ಇಂತಹ ಆಶಾದಾಯಕ ಬೆಳವಣಿಗೆ ಇತ್ತು.

ಆರ್ಥಿಕ ಪರಿಣತರ ಪ್ರಕಾರ ಆಹಾರ ಬೆಲೆಗಳು ಕಡಿಮೆಯಾಗಲು ಅನೇಕ ಕಾರಣಗಳಿವೆ. ಅವುಗಳಲ್ಲಿ ಪ್ರಮುಖವಾದವು ಬಂಪರ್​​ ಕೃಷಿ ಬೆಳೆಗಳು, ಕಡಿಮೆ ಬೇಡಿಕೆ, ಉತ್ತಮಗೊಂಡಿರುವ ಸರಬರಾಜು ನಿರ್ವಹಣೆ, ಜಾಗತಿಕ ಮಟ್ಟದಲ್ಲಿ ಕಡಿಮೆ ದರಗಳು ಮತ್ತು ಪ್ರಮುಖವಾಗಿ ಕನಿಷ್ಠ ಬೆಂಬಲ ಬೆಲೆಗಳನ್ನು ಹೆಚ್ಚಿಸಿರುವುದರಿಂದ ಆಹಾರ ಪದಾರ್ಥಗಳ ಬೆಲೆ ಹೆಚ್ಚಳ ಇಳಿಕೆಯಾಗಿದೆ. ಮುಂದಿನ ಮುಂಗಾರು ಋತುವನ್ನು ಆಧರಿಸಿ, ಮುಂದಿನ ವರ್ಷದ ಆಹಾರ ಬೆಲೆಗಳ ಏರಿಕೆ-ಇಳಿಕೆ ಇತ್ಯರ್ಥವಾಗಲಿದೆ ಎಂದು ಕ್ರಿಸಿಲ್​ ಆರ್ಥಿಕತಜ್ಞ ಡಿಕೆ ಜೋಶಿ ವಿಶ್ಲೇಷಿಸಿದ್ದಾರೆ.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv