ಟೆನ್ಶನ್ ಆದಾಗ ಉಗುರು ಕಚ್ಚುತ್ತೀರಾ? ಬಿಟ್ಬಿಡಿ ಈ ದುರಭ್ಯಾಸ

ಟೆನ್ಷನ್ ಆದಾಗ ನಿಮಗೇ ಗೊತ್ತಿಲ್ಲದಂತೆ ಉಗುರು ಕಚ್ಚೋಕೆ ಶುರುಮಾಡ್ತಿರಾ? ಹಾಗಿದ್ರೆ ಎಚ್ಚರ! ಇದು ಕೇವಲ ನಿಮ್ಮ ಬೆರಳುಗಳ ಸೌಂದರ್ಯ ಹಾಳು ಮಾಡೋದಷ್ಟೇ ಅಲ್ಲ. ಇದು ಉಗುರುಗಳಲ್ಲಿ ಇನ್ಫೆಕ್ಷನ್ ಹರಡಿ ಡೇಂಜರಸ್ ಬ್ಯಾಕ್ಟೀರಿಯಾ, ವೈರಸ್‌ಗಳು ಬೆರಳುಗಳ ಮೂಲಕ ಹೆೊಟ್ಟೆ ಸೇರಿ ನಿಮ್ಮ ಇಡೀ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು. ಉಗುರು ಕಚ್ಚೋ ದುರಭ್ಯಾಸದಿಂದ ದೂರಾಗಬೇಕು ಅಂದ್ರೆ ಹೀಗೆ ಮಾಡಿ;

1. ಉಗುರನ್ನ ಆದಷ್ಟು ಚಿಕ್ಕದಾಗಿ ಕಟ್ ಮಾಡಿ
ಉಗುರುಗಳನ್ನ ಕಟ್ ಮಾಡುವಾಗ ಆದಷ್ಟು ಚಿಕ್ಕದಾಗಿ ಕತ್ತರಿಸಿ. ಸ್ವಲ್ಪ ಉಗುರು ಬಂದರೂ ಆಗಾಗೇ ನೇಲ್ ಕಟರ್‌ನಲ್ಲಿ ಕಟ್ ಮಾಡಿಬಿಡಿ. ಒಂದು ಶೇಪ್‌ ಕೊಟ್ಟು ನೀಟಾಗಿಡಿ. ಆಗ ಕಚ್ಚೋಕೆ ಉಗುರು ಇಲ್ಲದಿದ್ದಾಗ ಕ್ರಮೇಣ ಈ ಅಭ್ಯಾಸ ಕಡಿಮೆಯಾಗುತ್ತೆ.

2.ಅಭ್ಯಾಸದ ಮೂಲ ಕಾರಣ ಕಂಡುಕೊಳ್ಳಿ
ಕೆಲವರು ಸಿಟ್ಟಾದಾಗ ಉಗುರು ಕಚ್ಚುತ್ತಾರೆ. ಕೆಲವರಿಗೆ ಒತ್ತಡದಲ್ಲಿದ್ದಾಗ ಉಗುರು ಕಚ್ಚೋ ಅಭ್ಯಾಸ, ಇನ್ನು ಕೆಲವರು ಹಸಿದಾಗ., ಕೋಪ ಬಂದಾಗ.. ಹೀಗೆ ಒಬ್ಬೊಬ್ಬರಿಗೆ ಒಂದೊಂದು ಕಾರಣ. ಈ ನಿಜವಾದ ಕಾರಣ ಏನು ಅನ್ನೋದನ್ನ ಅರ್ಥ ಮಾಡಿಕೊಳ್ಳಿ. ಅಂಥ ಸಂದರ್ಭ ಬಂದಾಗ ಉಗುರು ಕಚ್ಚದಿರಲು ಪ್ರಯತ್ನಿಸಿ.

3. ಬೆರಳುಗಳನ್ನ ಅಥವಾ ಬಾಯಿಯನ್ನ ಬ್ಯುಸಿಯಾಗಿಡಿ
ಉಗುರು ಕಚ್ಚಬೇಕು ಅನ್ನಿಸಿದಾಗ ನಿಮ್ಮ ಬೆರಳುಗಳಿಗೆ ಉದ್ದೇಶಪೂರ್ವಕವಾಗಿ ಯಾವುದಾದ್ರೂ ಕೆಲಸ ಕೊಡಿ. ಸ್ಟ್ರೆಸ್ ಬಾಲ್ ಕೈಲಿ ಹಿಡಿರಿ. ಅಥವಾ ಚ್ಯೂಯಿಂಗ್ ಗಮ್ ಬಾಯಿಗೆ ಹಾಕ್ಕೊಂಡು ಬಾಯಿಯನ್ನ ಬ್ಯುಸಿ ಮಾಡಿ. ಆಗ ಉಗುರು ಕಚ್ಚೋ ಸಾಧ್ಯತೆಯಿರೋದೆ ಇಲ್ಲ.

4. ಗಾಢವಾದ ಉಗುರುಬಣ್ಣ ಹಚ್ಚಿ
ವಿಚಿತ್ರವಾದ್ರೂ ಇದನ್ನ ಫಾಲೋ ಮಾಡ್ಬಹುದು. ನೇಲ್ ಪಾಲಿಶ್ ಕಲರ್ ಗಾಢವಾಗಿದ್ದರೆ ಉಗುರು ಕಚ್ಚುವ ಮುನ್ನ ಇದು ನಿಮ್ಮನ್ನ ಕೊಂಚ ತಡೆಯುತ್ತೆ.

ನೆನಪಿಡಿ. ಇದೆಲ್ಲಾ ತಕ್ಷಣಕ್ಕೆ ಸಾಧ್ಯವಾಗದಿದ್ರೂ ಕ್ರಮೇಣ ಟಿಪ್ಸ್ ಫಾಲೋ ಮಾಡೋದ್ರಿಂದ ಈ ದುರಭ್ಯಾಸದಿಂದ ಮುಕ್ತಿ ಹೊಂದಬಹುದು.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv