ಮೇವೆದರ್ ಬಳಿ ಇವೆ 113 ಕೋಟಿ ಬೆಲೆಬಾಳುವ ವಜ್ರದ ವಾಚುಗಳು..!

ಅಮೆರಿಕಾದ ಖ್ಯಾತ ಬಾಕ್ಸರ್​ ಫ್ಲಾಯ್ಡ್ ಮೇವೆದರ್ ಬಳಿ ಬರೋಬ್ಬರಿ 113 ಕೋಟಿ ಬೆಲೆಬಾಳುವ, 41 ವಜ್ರದ ವಾಚುಗಳ ಸಂಗ್ರಹವೇ ಇದೆ. ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಕ್ರೇಜ್​ ಇದ್ದೇ ಇರುತ್ತೆ. ಅದರಲ್ಲೂ ಕೈ ತುಂಬ ಹಣವಿದ್ದರಂತೂ ಮುಗಿದೇ ಹೊಯಿತು. ಅವರ ಆಸಕ್ತಿಗೆ ತಕ್ಕಂತೆ ಬೇಕಾದ ವಸ್ತುಗಳ ರಾಶಿಯನ್ನೇ ಖರೀದಿಸುತ್ತಾರೆ. ಅದೇ ರೀತಿ ದುಬಾರಿ ವಾಚ್​ಗಳ ಕ್ರೇಜ್ ಬೆಳಸಿಕೊಂಡಿರುವ ಖ್ಯಾತ ಬಾಕ್ಸರ್​, ವಜ್ರದ ವಾಚುಗಳ ದೊಡ್ಡ ಸಂಗ್ರಹವನ್ನೇ ಹೊಂದಿದ್ದಾರೆ. ವಿಶ್ವದ ಶ್ರೀಮಂತ ಕ್ರೀಡಾಪಟುಗಳಲ್ಲಿ ಒಬ್ಬರಾಗಿರುವ ಮೇವೆದರ್, ಬಾಕ್ಸಿಂಗ್​ ಆಖಾಡಕ್ಕೆ ಇಳಿದ್ರು ಅಂದ್ರೆ ಸಾಕು ಕೋಟಿ ಕೋಟಿ ಹಣ ಪಡೆಯುತ್ತಾರೆ. ಇತ್ತೀಚಿಗಷ್ಟೇ 9 ನಿಮಿಷಗಳ ಬಾಕ್ಸಿಂಗ್​ ಪಂದ್ಯ ಒಂದರಲ್ಲಿ ಭಾಗವಹಿಸಿದ್ದ ಮೇವೆದರ್​ ಕೇವಲ 2 ನಿಮಿಷ 20 ಸೆಕೆಂಡ್​ಗಳಲ್ಲೇ ಎದುರಾಳಿಯನ್ನ ಹೊಡೆದುರುಳಿಸಿ ಬರೋಬ್ಬರಿ 63 ಕೋಟಿಯಷ್ಟು ದೊಡ್ಡ ಮೊತ್ತವನ್ನ ಗೆದ್ದು ಸುದ್ದಿಯಾಗಿದ್ರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: conatct@firstnews.tv