ಫ್ಲೆಕ್ಸ್ ಬ್ಯಾನ್​, ಸಿನೆಮಾ ಪ್ರಚಾರಕ್ಕೆ ನಿರ್ದಿಷ್ಟ ಸ್ಥಳ ನಿಗದಿಪಡಿಸಿ: ಶಿವಣ್ಣ

ಬೆಂಗಳೂರು: ಹೈ ಕೋರ್ಟ್​ ಆದೇಶದ ಮೇಲೆ ಬಿಬಿಎಂಪಿ ನಗರದಾದ್ಯಂತ ಫ್ಲೆಕ್ಸ್​, ಪೋಸ್ಟರ್​ಗಳಿಗೆ ನಿಷೇಧ ಹೇರಿದೆ. ಫ್ಲೆಕ್ಸ್​​ ನಿಷೇಧದಿಂದ ಸಿನಿಮಾ ಪ್ರಚಾರಕ್ಕೆ ಭಾರಿ ತೊಂದರೆಯಾಗಿದೆ.

ಈ ವಿಚಾರವಾಗಿ ಚರ್ಚಿಸಲು ಇಂದು ನಟ ಶಿವರಾಜ್​ ಕುಮಾರ್​, ಫಿಲ್ಮ್ ಚೇಂಬರ್ ಅಧ್ಯಕ್ಷ ಚಿನ್ನೇಗೌಡ ಹಾಗೂ ನಿರ್ಮಾಪಕ ಶ್ರೀಕಾಂತ್​ ಇಂದು ಸಿಎಂ ಕುಮಾರಸ್ವಾಮಿಯವರನ್ನು ಭೇಟಿ ಮಾಡಿದರು.

ವಿಧಾನಸೌಧದ ಸಿಎಂ ಕೊಠಡಿಯಲ್ಲಿ ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಶಿವಣ್ಣ, ಫ್ಲೆಕ್ಸ್ ನಿಷೇಧದಿಂದ ಚಿತ್ರಗಳ ಪ್ರಚಾರಕ್ಕೆ ತೊಂದರೆಯಾಗುತ್ತಿದೆ. ಹಾಗಾಗಿ ಪರಿಸರ ಸ್ನೇಹಿ ಭಿತ್ತಿ ಪತ್ರಗಳ ಮೂಲಕ ಸಿನೆಮಾ ಪ್ರಚಾರಕ್ಕೆ ಅವಕಾಶ ಕೊಡಬೇಕು. ನಿರ್ದಿಷ್ಟ ಸ್ಥಳಗಳಲ್ಲಾದರೂ ಪೋಸ್ಟರ್ ಅಂಟಿಸಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv