ಸೇನೆ-ಉಗ್ರರ ಮಧ್ಯೆ ಕಾಳಗ, 6 ಭಯೋತ್ಪಾದಕರು ಫಿನಿಶ್

ಜಮ್ಮು-ಕಾಶ್ಮೀರ: ಬಿಎಸ್ಎಫ್​ ಯೋಧರು ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ 6 ಭಯೋತ್ಪಾದಕರನ್ನ ಫಿನಿಶ್ ಮಾಡಲಾಗಿದೆ. ದಕ್ಷಿಣ ಕಾಶ್ಮೀರದ ಖುಲ್ಗಾಮ್​ ಜಿಲ್ಲೆಯ ಕೆಲ್ಲಮ್ ​​​​ದೆವ್ಸರ್​​​ನಲ್ಲಿ ಉಗ್ರರ ವಿರುದ್ಧ ಸತತ 6 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಆರು ಉಗ್ರರನ್ನ ಮಟಾಷ್​ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರು ಮತ್ತು ರಾಷ್ಟ್ರೀಯ ರೈಫಲ್ಸ್ ತಂಡ ಬೆಳಗ್ಗೆ 6 ಗಂಟೆಯಿಂದ ಜಂಟಿಯಾಗಿ ಕಾರ್ಯಾಚರಣೆಗೆ ಇಳಿದಿದ್ದರು. ಹತ್ಯೆಯಾದ ಉಗ್ರರಿಂದ ಶಸ್ತ್ರಾಸ್ತ್ರಗಳು ಹಾಗೂ ಸ್ಫೋಟಕ ವಸ್ತುಗಳನ್ನ ವಶಪಡಿಸಿಕೊಂಡಿದ್ದಾರೆ. ಶ್ರೀನಗರದ ದಕ್ಷಿಣಕ್ಕೆ ಸುಮಾರು 100 ಕಿ.ಮೀ. ದೂರದಲ್ಲಿರುವ ಗ್ರಾಮದಲ್ಲಿ ಇಬ್ಬರು ಮೂವರು ಉಗ್ರರು ಅಡಗಿಕೊಂಡಿದ್ದಾರೆಂದು ಭದ್ರತಾ ಪಡೆಗಳು ಆರಂಭದಲ್ಲಿ ಶಂಕಿಸಿದ್ದರು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಇಂಟರ್ನೆಟ್ ಸೇವೆಯನ್ನ ಸ್ಥಗಿತಗೊಳಿಸಿದ್ದರು.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv