13 ಬಗೆಯ ಕ್ಯಾನ್ಸರ್‌ ಅಪಾಯ ಕಡಿಮೆ ಮಾಡಬಲ್ಲದು ಎಕ್ಸರ್ಸೈಜ್​​!

ಸದೃಢ ದೇಹ ತಮ್ಮದಾಗಿಸಿಕೊಳ್ಳಲು ಬಹಳಷ್ಟು ಜನ ನಿತ್ಯ ಜಿಮ್, ಹೆಲ್ತ್​ಕೇರ್ ಸೆಂಟರ್​ಗಳ ಮೊರೆ ಹೋಗ್ತಾರೆ. ಫಿಟ್ನೆಸ್​ ಕಾಳಜಿ ಇರುವವರ ದೈಹಿಕ ಆರೋಗ್ಯದ ಜೊತೆಜೊತೆಗೆ ಮಾನಸಿಕ ಆರೋಗ್ಯವೂ ಸುಸ್ಥಿತಿಯಲ್ಲಿರುತ್ತದೆ. ಅದರಲ್ಲೂ, ಫಿಟ್​​ ಆಗಿರುವವರಲ್ಲಿ ಶ್ವಾಸಕೋಶದ ಕ್ಯಾನ್ಸರ್‌, ಸೇರಿದಂತೆ 13 ಬಗೆಯ ಕ್ಯಾನ್ಸರ್‌ ಅಪಾಯವನ್ನು ತಡೆಗಟ್ಟಬಹುದು ಎಂದು ಸಂಶೋಧನೆ ಹೇಳಿದೆ.

ಈ ಬಗ್ಗೆ ಸಂಶೋಧಕರು ರಿಸರ್ಚ್‌ ನಡೆಸಿದ್ದು, 1991 ರಿಂದ 2009ರವರೆಗೆ 49,143 ವಯಸ್ಕರನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಪರೀಕ್ಷೆಯಲ್ಲಿ ಪಾಲ್ಗೊಂಡ ವ್ಯಕ್ತಿಗಳಿಗೆ ಎಕ್ಸರ್ಸೈಜ್ ಸ್ಟ್ರೆಸ್ ಟೆಸ್ಟಿಂಗ್ ಮಾಡಲಾಯಿತು. ಪರೀಕ್ಷೆಯಲ್ಲಿ ಫಿಟ್​​​ ಆಗಿರುವವರು ಉತ್ತಮ ಆರೋಗ್ಯ ಹೊಂದಿದ್ದಾಗಿ ತಿಳಿದುಬಂದಿದೆ.  ಶೇ.77 ರಷ್ಟು ಕ್ಯಾನ್ಸರ್‌, ಹಾಗೂ ಶೇ. 61 ರಷ್ಟು ಪ್ರಮಾಣ ಕರುಳಿನ ಕ್ಯಾನ್ಸರ್ ಬೆಳವಣಿಗೆಯನ್ನು ಫಿಟ್ನೆಸ್‌ನಿಂದ ತಡೆಗಟ್ಟಬಹುದಾಗಿದೆ ಎನ್ನಲಾಗಿದೆ. ಅಲ್ಲದೇ ಫಿಟ್ನೆಸ್ ಇರುವವರಲ್ಲಿ ಶೇ .44 ರಷ್ಟು ಅಕಾಲಿಕ ಮರಣವನ್ನು ತಡೆಗಟ್ಟಬಹುದು, ಕ್ಯಾನ್ಸರ್‌ನಿಂದ ಬಳಲುತ್ತಿದ್ದು ಫಿಟ್ನೆಸ್‌ನಲ್ಲಿ ತೊಡಗಿರುವರಲ್ಲಿ ಶೇ. 84ರಷ್ಟು ಪ್ರಮಾಣ ಕಾಯಿಲೆ ಕಡಿಮೆ ಮಾಡುವ ಸಾಧ್ಯತೆ ಹೆಚ್ಚು ಎಂದು ತಿಳಿದು ಬಂದಿದೆ.

ಫಿಸಿಕಲ್ ಆ್ಯಕ್ಟಿವಿಟಿ ಹಾಗೂ ಎಕ್ಸರ್ಸೈಜ್​ನಿಂದ ಮಲ್ಟಿಪಲ್ ಮೈಲೋಮಾ ತಡೆಗಟ್ಟಬಲ್ಲದ್ದು, ಮಲ್ಟಿಪಲ್ ಮೈಲೋಮಾ ಎಂದರೆ ಪ್ಲಾಸ್ಮಾ ಸೆಲ್‌ಗಳ ಕ್ಯಾನ್ಸರ್. ಇದಲ್ಲದೆ ಬ್ಲಡ್‌ ಕ್ಯಾನ್ಸರ್‌, ತಲೆ ಹಾಗೂ ಕುತ್ತಿಗೆಯ ಕ್ಯಾನ್ಸರ್, ಮೂತ್ರಕೋಶ ಹಾಗೂ ಶ್ವಾಸಕೋಶದ ಸಮಸ್ಯೆಯನ್ನು ಕೂಡ ತಡೆಗಟ್ಟಲು ಎಕ್ಸರ್ಸೈಜ್ ಸಹಾಯ ಮಾಡುತ್ತದೆ  ಎಂದು ತಿಳಿದು ಬಂದಿದೆ.

ಕ್ಯಾನ್ಸರ್ ಕಾಯಿಲೆ ಮೇಲೆ ಫಿಟ್ನೆಸ್ ಹೇಗೆ ಪರಿಣಾಮ ಬೀರುತ್ತದೆ ಎಂದು ನಾವು ನಡೆಸಿರುವ ಸಂಶೋಧನೆ ತುಂಬಾ ಮಹತ್ವದ್ದು. ಫಿಟ್ನೆಸ್‌ನಿಂದ ಹೃದಯ ಕಾಯಿಲೆ, ಕ್ಯಾನ್ಸರ್‌ನಿಂದ ದೂರವಿರಬಹುದು ಎಂದು ಅಮೇರಿಕಾದ ಜಾನ್ಸ್‌ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಕ್ಯಾಠರಿನ್ ಹ್ಯಾಂಡಿ ಮಾರ್ಷಲ್ ಹೇಳಿದ್ದಾರೆ.


Follow us on: 

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv