ದೋಣಿ ಮುಳುಗಿ ಅಪಾಯಕ್ಕೆ ಸಿಲುಕಿದ್ದ 16 ಮೀನುಗಾರರ ರಕ್ಷಣೆ

ಉಡುಪಿ: ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ 16 ಜನರ ಮೀನುಗಾರರ ತಂಡ ದೋಣಿಯಲ್ಲಿ ರಂಧ್ರ ಬಿದ್ದಿದ್ದ ಪರಿಣಾಮ ಬೋಟ್​ ಮುಳುಗಡೆಗೊಂಡು ಅಪಾಯಕ್ಕೆ ಸಿಲುಕಿದ್ದರು.

ಇನ್ನು ಕಡಲು ಪ್ರಕ್ಷುಬ್ಧವಾದ ಹಿನ್ನೆಲೆಯಲ್ಲಿ ಭಟ್ಕಳ ಗಂಗೊಳ್ಳಿ ನಡುವೆ ಎರಡು ಬೋಟುಗಳು ಮುಳುಗಡೆಯಾಗಿವೆ. ಮಲ್ಪೆಯಿಂದ ಆಳ ಸಮುದ್ರಕ್ಕೆ ನಿನ್ನೆ ಬೆಳಗ್ಗೆ ತೆರಳಿದ್ದ ಶಿವಗಣೇಶ್​ ಬೋಟು ಸಂಜೆ ಮರಳುವಾಗ ಮುಳುಗಡೆಗೊಂಡಿದೆ. ಇಂದು ಬೆಳಗ್ಗೆ ಮಲ್ಪೆಗೆ ಮರಳುತ್ತಿದ್ದ ಪದ್ಮದಾಸ್​ ಬೋಟು ಕೂಡ ಸಮುದ್ರದಲ್ಲಿ ಮುಳುಗಡೆಯಾಗಿದೆ. ಮೀನುಗಾರರ ಮಾಹಿತಿ ಪಡೆದು ರಕ್ಷಣೆ ಕಾರ್ಯಕ್ಕೆ 2 ಬೋಟ್​ನಲ್ಲಿ ಮೀನುಗಾರರ ತಂಡ ತೆರಳಿತ್ತು. ನಿನ್ನೆ ಸಂಜೆ ಮುಳುಗುತ್ತಿದ್ದ ಶಿವಗಣೇಶ್ ಬೋಟಿನಲ್ಲಿದ್ದ 8 ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಇಂದು ಬೆಳಿಗ್ಗೆ ಮುಳುಗುತ್ತಿದ್ದ ಪದ್ಮದಾಸ್ ಬೋಟಿನಲ್ಲಿದ್ದ 8 ಮಂದಿಯನ್ನು ಭಜರಂಗಿ ಬೋಟಿನ ಮೀನುಗಾರು ರಕ್ಷಿಸಿದ್ದಾರೆ. ನಿನ್ನೆ‌ ಸಂಜೆ‌ ಹಾಗೂ ಇಂದು ಬೆಳಿಗ್ಗೆ ಪ್ರತ್ಯೇಕ ಬೋಟು‌ ಮುಳುಗಡೆಯಲ್ಲಿ ಅಪಾಯಕ್ಕೆ ಸಿಲುಕಿದ್ದ 16ಮಂದಿ ಮೀನುಗಾರರ ರಕ್ಷಣೆ ಮಾಡಿ ಮಲ್ಪೆಗೆ ಕರೆ ತರಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.tv