ಕೆರೆಯಲ್ಲಿ ಕಾಣಿಸಿಕೊಂಡ ಮೊಸಳೆಯನ್ನು ಸೆರೆ ಹಿಡಿದ್ರು ಮೀನುಗಾರರು..!

ರಾಯಚೂರು: ಮರ್ಚೇಡ ಗ್ರಾಮದ ಕೆರೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಕಾಣಿಸಿಕೊಳ್ಳುತ್ತಿದ್ದ ಮೊಸಳೆಯೊಂದನ್ನ ಮೀನುಗಾರರು ಸೆರೆ ಹಿಡಿದಿದ್ದಾರೆ.
ಕೆರೆಯಲ್ಲಿ ಮೊಸಳೆ ಕಂಡಿದ್ದರಿಂದ‌ ಮೀನುಗಾರರು ಕೆರೆಯಲ್ಲಿ ಇಳಿಯಲು ಹಿಂಜರಿಯುತ್ತಿದ್ದರು. ಇಂದು ಸಹ ಮೊಸಳೆ ದಡದ ಬಳಿ ಕಾಣಿಸಿಕೊಂಡಿತ್ತು. ಮನ್ಸಾಲಾಪುರ ಗ್ರಾಮದ ಮೀನುಗಾರರು ಮೊಸಳೆಯನ್ನು ಸೆರೆ ಹಿಡಿದಿದ್ದಾರೆ. ಇನ್ನೂ ಸ್ಥಳಕ್ಕೆ ರಾಯಚೂರು ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಮೊಸಳೆಯನ್ನು ವಶಕ್ಕೆ ಪಡೆದಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv